ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್

blank

ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ 2017ರ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 3 ದ್ವಿಶತಕ ಸಿಡಿಸಿದ ಅಪೂರ್ವ ವಿಶ್ವದಾಖಲೆ ಅವರದಾಗಿತ್ತು. ಮೊಹಾಲಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ರೋಹಿತ್ ಶರ್ಮರ ಪತ್ನಿ ರಿತಿಕಾ ಸಜ್‌ದೇ ಆ ಕ್ಷಣ ಕಣ್ಣೀರು ಹಾಕಿದ್ದರು. ರಿತಿಕಾ ಯಾಕೆ ಅಷ್ಟೊಂದು ಭಾವುಕರಾದರು ಎಂಬ ಪ್ರಶ್ನೆ ಆಗ ಎಲ್ಲ ಕ್ರಿಕೆಟ್ ಪ್ರೇಮಿಗಳನ್ನು ಕಾಡಿತ್ತು. ಅದಕ್ಕೀಗ ರೋಹಿತ್ ಶರ್ಮ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಈಡೇರುತ್ತಾ ಲಿಯಾಂಡರ್ ಪೇಸ್ ಗ್ರಾಂಡ್ ಸ್ಲಾಂ ಶತಕದ ಕನಸು?

ಸಹ-ಆಟಗಾರರಾದ ಶಿಖರ್ ಧವನ್ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆಗೆ ರೋಹಿತ್ ಶರ್ಮ ಮಾತುಕತೆ ನಡೆಸಿರುವ ವಿಡಿಯೋವನ್ನು ಬಿಸಿಸಿಐ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ರೋಹಿತ್, ಪತ್ನಿ ರಿತಿಕಾರ ಕಣ್ಣೀರಿಗೆ ಕಾರಣ ವಿವರಿಸಿದ್ದಾರೆ. ಆ ಪಂದ್ಯದಲ್ಲಿ ರೋಹಿತ್ ಶರ್ಮ 195 ರನ್ ಗಳಿಸಿದ್ದಾಗ ಸಿಂಗಲ್ಸ್ ಕಸಿಯುವ ಯತ್ನದಲ್ಲಿ ಡೈವ್ ಹೊಡೆದಾಗ ಅವರ ಕೈ ಟ್ವಿಸ್ಟ್ ಆಗಿತ್ತೆಂದು ರಿತಿಕಾ ಆತಂಕಗೊಂಡಿದ್ದರಂತೆ. ಪತಿ ನೋವಿನ ನಡುವಲ್ಲೂ ಆಡಿ ದ್ವಿಶತಕ ಪೂರೈಸಿದ್ದಕ್ಕಾಗಿ ರಿತಿಕಾ ಕಣ್ಣಲ್ಲಿ ನೀರು ಹರಿದಿತ್ತಂತೆ.

ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್

‘ನೀನೇಕೆ ಅತ್ತೆ ಎಂದು ನಾನು ಕೂಡ ಪಂದ್ಯದ ಬಳಿಕ ರಿತಿಕಾ ಬಳಿ ಪ್ರಶ್ನಿಸಿದ್ದೆ. ಆಗ ಅವಳು, 196ನೇ ರನ್‌ಗಾಗಿ ಡೈವ್ ಹೊಡೆದ ಕ್ಷಣವನ್ನು ನೆನಪಿಸಿದಳು. ನನ್ನ ಕೈ ಟ್ವಿಸ್ಟ್ ಆಗಿದೆ ಎಂದೇ ಅವಳು ಗಾಬರಿಗೊಂಡಿದ್ದಳು. ಅವಳಿಗೆ ಅದು ಆತಂಕದ ಕ್ಷಣವಾಗಿತ್ತು. ಅದರಿಂದಾಗಿ ಆಕೆ ಸಾಕಷ್ಟು ಭಾವುಕಳಾಗಿದ್ದಳು’ ಎಂದು ರೋಹಿತ್ ವಿವರಿಸಿದ್ದಾರೆ. ಅದು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೂ ಆಗಿದ್ದ ಕಾರಣ ವಿಶೇಷವಾದ ಇನಿಂಗ್ಸ್ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅರ್ಜುನ ಪ್ರಶಸ್ತಿ ರೇಸ್‌ನಲ್ಲಿ ರಾಜ್ಯದ ಮೂವರು ಮಹಿಳೆಯರು

ರೋಹಿತ್ ಶರ್ಮ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದರೆ, 2014ರಲ್ಲಿ ಶ್ರೀಲಂಕಾ ವಿರುದ್ಧ ಕೋಲ್ಕತದಲ್ಲಿ 2ನೇ ದ್ವಿಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ ಅವರು ಸಿಡಿಸಿದ 264 ರನ್ ಏಕದಿನ ಕ್ರಿಕೆಟ್ ಇತಿಹಾಸದ ಗರಿಷ್ಠ ವೈಯಕ್ತಿಕ ಗಳಿಕೆಯ ವಿಶ್ವದಾಖಲೆಯೂ ಆಗಿದೆ.

‘ವಿರೂಷ್ಕಾ ಡಿವೋರ್ಸ್’ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ ಯಾಕೆ ಗೊತ್ತೇ?

Share This Article

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…

ಈ 5 ಬಿಳಿ ಆಹಾರಗಳಿಂದ ದೂರವಿದ್ರೆ ನೀವು ಜೀವನಪೂರ್ತಿ ಆರೋಗ್ಯವಾಗಿರಬಹುದು! ಉಪಯುಕ್ತ ಮಾಹಿತಿ ಇಲ್ಲಿದೆ… White foods

White Foods : ಇತ್ತೀಚಿನ ದಿನಗಳಲ್ಲಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯವಾಗಿರಬೇಕಾದರೆ ಆಹಾರದ…

ಪ್ರತಿನಿತ್ಯ 5 ನೆನೆಸಿದ ಗೋಡಂಬಿ ತಿಂದರೆ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ… Soaked Cashews

Soaked Cashews : ಡ್ರೈಫ್ರೂಟ್ಸ್​ ಗೋಡಂಬಿ ಅಂದರೆ ಬಹುತೇಕರಿಗೆ ಇಷ್ಟ. ಇದನ್ನು ಆರೋಗ್ಯ ಕಣಜ ಎಂದೇ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ