Rohit Sharma Retirement: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಭಾರತ ಹೀನಾಯ ಸೋಲು ಕಂಡಿತು. ತಂಡದ ನಾಯಕನಾಗಿ ಆಸೀಸ್ ನೆಲದಲ್ಲಿ ಉತ್ತಮ ಪ್ರದರ್ಶನ ತೋರದ ರೋಹಿತ್ ಶರ್ಮ, ಸರಣಿಯುದ್ದಕ್ಕೂ ಅತ್ಯಂತ ಕಳಪೆ ಫಾರ್ಮ್ ಹೊಂದಿದ್ದು ಇದೀಗ ಅವರ ನಿವೃತ್ತಿಯನ್ನು ಪ್ರಶ್ನಿಸಿದೆ. ಕ್ಯಾಪ್ಟನ್ ಆಗಿ ತಂಡವನ್ನು ಗೆಲುವಿನೆಡೆಗೆ ಸಾಗಿಸಬೇಕಿದ್ದ ರೋಹಿತ್, ನಾಯಕತ್ವದ ಜವಾಬ್ದಾರಿಯ ಜತೆಗೆ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿದರು. ಸದ್ಯ ಇದೇ ರೋಹಿತ್ ನಿವೃತ್ತಿಗೆ ಕಾರಣವಾಗಿದ್ದು, ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: Chalavadi Narayanaswamy | ಈ ಸರ್ಕಾರದ ಹಗ್ಗ ಜಗ್ಗಾಟದಲ್ಲಿ ಹಗ್ಗಾನೆ ಕಿತ್ತೊಗುವ ಪರಿಸ್ಥಿತಿ ಉಂಟಾಗಿದೆ
ಆಸೀಸ್ ವಿರುದ್ಧದ ಅಂತಿಮ ಹಾಗೂ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ರೋಹಿತ್, ತಮ್ಮ ಆಟವು ಮಂದಗತಿಯಲ್ಲಿದೆ. ಹೀಗಾಗಿ ನನ್ನ ಬದಲಿಗೆ ಯುವ ಬ್ಯಾಟರ್ನ ಆಡಿಸುವುದು ಉತ್ತಮ ಎಂದು ಹೇಳಿ, ಒಂದೇ ಒಂದು ಪಂದ್ಯದಿಂದ ಹೊರಗಿದ್ದರು. ಇಲ್ಲಿಗೆ ರೋಹಿತ್ ಟೆಸ್ಟ್ ಕರಿಯರ್ ಮುಗೀತು ಎಂದೇ ಕ್ರಿಕೆಟ್ ಜಗತ್ತು ಊಹಿಸಿತು. ಆದರೆ, ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ ಕ್ಯಾಪ್ಟನ್ ರೋಹಿತ್ ಶರ್ಮ, ಕೇವಲ ಮೂರು ಪಂದ್ಯಗಳಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ನೀವು ನನ್ನ ನಿವೃತ್ತಿ ಪ್ರಶ್ನಿಸುತ್ತೀರಿ? ನಾನು ನಿವೃತ್ತಿ ಘೋಷಿಸುವ ಸಮಯ ದೂರವಿದೆ ಎಂದು ಹೇಳಿ, ತಮ್ಮ ಬಗ್ಗೆಗಿನ ವದಂತಿಗಳಿಗೆ ತೆರೆ ಎಳೆದರು.
ಇನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ರೋಹಿತ್ ಶರ್ಮರನ್ನು ಕೈಬಿಟ್ಟಿರುವ ಬಿಸಿಸಿಐ, ಇಂದು ನಡೆದ ಸಭೆಯಲ್ಲಿ ರೋಹಿತ್ರ ನಿವೃತ್ತಿ ವಿಚಾರವನ್ನು ಪ್ರಸ್ತಾಪಿಸಿದೆ. ರೋಹಿತ್ ಶರ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆಗಳು ಭುಗಿಲೇಳುತ್ತಿದ್ದಂತೆ ವರದಿಯೊಂದು ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ ನಿವೃತ್ತಿ ಪಡೆಯಲಿರುವುದು ಖಚಿತ ಎಂದು ತಿಳಿಸಿದೆ. ಅಸಲಿಗೆ ಆತಿಥೇಯ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಂಡ ಬಳಿಕ ರೋಹಿತ್ ಮುಂದುವರೆಯಲಿದ್ದಾರೆಯೇ? ಇಲ್ಲವೇ? ಎಂಬುದು ಸ್ಪಷ್ಟವಾಗಲಿದೆ,(ಏಜೆನ್ಸೀಸ್).