Rohit Sharma: ಇಂದು (ಫೆ.06) ಮಹಾರಾಷ್ಟ್ರದ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಪಡೆ 248 ರನ್ಗಳಿಗೆ ಆಲ್ ಔಟ್ ಆಯಿತು. 249 ರನ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಅಕ್ಸರ್ ಪಟೇಲ್ ಅಬ್ಬರದ ಬ್ಯಾಟಿಂಗ್ ಮೊದಲ ಏಕದಿನ ಪಂದ್ಯವನ್ನು ಗೆದ್ದು ಬೀಗಲು ಸಹಾಯ ಮಾಡಿತು.
ಇದನ್ನೂ ಓದಿ: ಗಮನ ಸೆಳೆದ ಅಂಗವಿಕಲರ ಕ್ರೀಡಾಕೂಟ: ವಿವಿಧ ಕ್ರೀಡೆಗಳಲ್ಲಿ ಪ್ರತಿಭೆ ಪ್ರದರ್ಶನ
7 ಎಸೆತ 2 ರನ್
ಶುಭಮನ್ ಗಿಲ್ (87 ರನ್), ಶ್ರೇಯಸ್ ಅಯ್ಯರ್ ( 59 ರನ್) ಮತ್ತು ಅಕ್ಸರ್ ಪಟೇಲ್ (52 ರನ್) ಅವರ ಆಕರ್ಷಕ ಬ್ಯಾಟಿಂಗ್, ಆಂಗ್ಲರ ವಿರುದ್ಧದ ಮೊದಲ ಏಕದಿನ ಪಂದ್ಯದ ಗೆಲುವಿಗೆ ಕಾರಣವಾಯಿತು. ತಂಡ ಗೆದ್ದ ಸಂಭ್ರಮ ಒಂದೆಡೆಯಾದರೆ, ಎಂದಿನಂತೆ ಇಲ್ಲಿಯೂ ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದ ರೋಹಿತ್ ಶರ್ಮ ಆಟ ಮತ್ತೊಂದೆಡೆ. ಯಶಸ್ವಿ ಜೈಸ್ವಾಲ್ ಜತೆಗೆ ಓಪನಿಂಗ್ಗೆ ಬಂದ ರೋಹಿತ್, ಎದುರಿಸಿದ 7 ಎಸೆತಗಳಲ್ಲಿ ಬಾರಿಸಿದ್ದು ಕೇವಲ 2 ರನ್ ಮಾತ್ರ. ಏಳು ಎಸೆತ ಎದುರಿಸಿದ ರೋಹಿತ್, ಬ್ಯಾಟ್ ಮಾಡಲು ತೀರ ಪರದಾಡಿದರು.
ಮುಂದುವರಿದ ಕಳಪೆ ಫಾರ್ಮ್
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮ, ನಂತರದಲ್ಲಿ ಆಡಿದ ದೇಶಿಯ ರಣಜಿ ಟ್ರೋಫಿ ಪಂದ್ಯದಲ್ಲಿಯೂ ಕಳಪೆ ಫಾರ್ಮ್ ತೋರಿದರು. ಇದಾದ ನಂತರ ಅವರು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ ಎಂಬ ವಿಷಯ ಕೇಳಿ ಸಂತಸ ಪಟ್ಟಿದ್ದ ಕ್ರಿಕೆಟ್ ಪ್ರಿಯರು, ಏಕದಿನ ಫಾರ್ಮೆಟ್ನಲ್ಲಾದರೂ ಹಿಟ್ಮ್ಯಾನ್ ಅಬ್ಬರ ನೋಡಲು ಬಯಸಿದ್ದರು. ಆದ್ರೆ, ಇಲ್ಲಿಯೂ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ ರೋಹಿತ್ ಶರ್ಮ, ಅಭಿಮಾನಿಗಳನ್ನು ಅಕ್ಷರಶಃ ನಿರಾಸೆಗೆ ದೂಡಿದ್ದಾರೆ.
ನಿವೃತ್ತಿ ಪ್ರಶ್ನೆಗಳ ನಡುವೆಯೇ
ನಿವೃತ್ತಿ ಪ್ರಶ್ನೆಗಳು ತನ್ನನ್ನು ಸುತ್ತುವರಿದಿರುವ ಸಮಯದಲ್ಲೇ ರೋಹಿತ್ ಬ್ಯಾಟ್ನಿಂದ ಬರುತ್ತಿರುವ ರನ್ಗಳು ಅವರ ಸಾಮರ್ಥ್ಯವನ್ನು ಕೆಣಕಿ, ಭವಿಷ್ಯವನ್ನು ಪ್ರಶ್ನಿಸುತ್ತಿದೆ. ಟೆಸ್ಟ್, ರಣಜಿ ನಂತರ ಅಂತಾರಾಷ್ಟ್ರೀಯ ಏಕದಿನ ಫಾರ್ಮೆಟ್ನಲ್ಲಿಯೂ ರೋಹಿತ್ ಶರ್ಮ ಆಡುತ್ತಿರುವ ಶೈಲಿ ನೋಡಿದರೆ, ಕ್ಯಾಪ್ಟನ್ ಬ್ಯಾಟ್ ಮಾಡುವುದನ್ನೇ ಮರೆತುಹೋದಂತಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಒಂದನ್ನು ಗೆದ್ದಿರುವ ಭಾರತ, ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದೆ. ಈ ಎರಡು ಮ್ಯಾಚ್ಗಳಲ್ಲಿ ರೋಹಿತ್ರಿಂದ ಸ್ಫೋಟಕ ಇನ್ನಿಂಗ್ಸ್ ಬರಬಹುದೇ ಎಂಬ ನಿರೀಕ್ಷೆಗಳು ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿದೆ,(ಏಜೆನ್ಸೀಸ್).