Rohit Sharma: ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ, ಈಗಾಗಲೇ ಟಿ20 ಸರಣಿಯನ್ನೂ ಗೆದ್ದು, ಆಂಗ್ಲರನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಒಂದೆಡೆ ಟಿ20 ಮತ್ತು ಏಕದಿನ ಸರಣಿಯನ್ನು ಗೆದ್ದಿರುವ ಭಾರತಕ್ಕೆ ಔಟ್ ಆಫ್ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮ ಅವರ ಭರ್ಜರಿ ಕಮ್ಬ್ಯಾಕ್ ದೊಡ್ಡ ಭರವಸೆಯನ್ನೇ ನೀಡಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ಗಳಿಂದ ಗೆದ್ದ ಟೀಮ್ ಇಂಡಿಯಾಗೆ, ರೋಹಿತ್ ಶರ್ಮ ಅವರ ಆಕರ್ಷಕ ಶತಕದಾಟ (119) ಪಂದ್ಯದ ಸಂಪೂರ್ಣ ದಿಕ್ಕನ್ನೇ ಬದಲಾಯಿಸಿತು.
ಇದನ್ನೂ ಓದಿ: ಬೆಂಗಳೂರಲ್ಲಿ ಈ ಚಿಕ್ಕ ಫ್ಲ್ಯಾಟ್ನ ಬಾಡಿಗೆ ಮೊತ್ತಾ ಇಷ್ಟೊಂದಾ? ಯುವಕನ ಮಾತು ಕೇಳಿ ದಂಗಾದ್ರು ನೆಟ್ಟಿಗರು! Bengaluru
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೇರಿದಂತೆ ದೇಶಿಯ ರಣಜಿ ಟ್ರೋಫಿ ಪಂದ್ಯದಲ್ಲಿಯೂ ರೋಹಿತ್ ಅತ್ಯಂತ ಕಳಪೆ ಪ್ರದರ್ಶನ ಮುಂದುವರಿಸಿದ್ದು, ಅವರ ನಿವೃತ್ತಿಯನ್ನು ಪ್ರಶ್ನಿಸುವಂತೆ ಮಾಡಿತು. ಸತತವಾಗಿ ಕಳಪೆ ಫಾರ್ಮ್ ಅನ್ನೇ ಮುಂದುವರಿಸಿದ ರೋಹಿತ್ ಆಟದ ಬಗ್ಗೆ ತೀವ್ರ ಟೀಕೆ, ವ್ಯಂಗ್ಯಗಳು ವ್ಯಕ್ತವಾಗಿತ್ತು. ಈಗ ಒಂದೇ ಒಂದು ಪಂದ್ಯದಲ್ಲಿ ಅವರು ಗಳಿಸಿದ ಶತಕ, ಟೀಕೆಕಾರರ ಬಾಯಿ ಮುಚ್ಚಿಸಿದೆ. ಟೀಕೆಗಳ ಬದಲಿಗೆ ಸ್ಪೋಟಕ ಇನ್ನಿಂಗ್ಸ್ ಕೊಡುವ ಬಗ್ಗೆ ಭರವಸೆಯ ಮಾತುಗಳನ್ನು ಹೇಳುವಂತೆ ಮಾಡಿದೆ. ಇದು ಬದಲಾವಣೆಯ ಹಾದಿ ಎಂಬುದನ್ನು ಎತ್ತಿ ಹಿಡಿದಿದೆ.
ಇದೇ ಫಾರ್ಮ್
119 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮ, ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಲಿದ್ದಾರೆ. ನಾಯಕನಾಗಿ ಆತಿಥೇಯ ಪಾಕ್ ವಿರುದ್ಧ ಆಡಲಿರುವ ರೋಹಿತ್ ಶರ್ಮ, ತಂಡದ ಜವಾಬ್ದಾರಿ ಜತೆಗೆ ತಮ್ಮ ಆಟದ ಮೇಲೂ ಹೆಚ್ಚಿನ ಜವಾಬ್ದಾರಿ ವಹಿಸುವುದು ಅತೀ ಮುಖ್ಯ ಎಂಬುದು ಹಿರಿಯ ಕ್ರಿಕೆಟಿಗರ ಸಲಹೆ. ಸದ್ಯ ಈ ಕುರಿತಂತೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಹಿರಿಯ ಕ್ಯಾಪ್ಟನ್ ಮೊಹಮ್ಮದ್ ಅಜ್ರುದ್ದೀನ್, ರೋಹಿತ್ ಇದೇ ಫಾರ್ಮ್ ಅನ್ನು ಕಾಯ್ದುಕೊಂಡರೆ, ಖಂಡಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಗೆಲ್ಲುವ ಎಲ್ಲಾ ಅವಕಾಶಗಳು ಹೆಚ್ಚಿವೆ ಎಂದಿದ್ದಾರೆ.
“ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅವರ ಅದ್ಭುತ ಕಮ್ಬ್ಯಾಕ್ ಎಲ್ಲರ ಗಮನ ಸೆಳೆದಿದೆ. 32ನೇ ಶತಕ ಬಾರಿಸುವ ಮೂಲಕ ಭರ್ಜರಿ ಇನ್ನಿಂಗ್ಸ್ ದಾಖಲಿಸಿದ್ದಾರೆ. ಇದೇ ರೀತಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ರೋಹಿತ್ ಉತ್ತಮ ಪ್ರದರ್ಶನ ನೀಡಿದರೆ ಭಾರತ ಟ್ರೋಫಿ ಎತ್ತುವುದರಲ್ಲಿ ಯಾವುದೇ ಸಂದೇಹ ಇಲ್ಲ. ತಮ್ಮ ಫಾರ್ಮ್‌ಗೆ ಮರಳಲು ಇದು ಅವರಿಗೆ ಸರಿಯಾದ ಸಮಯ” ಎಂದು ಅಜರುದ್ದೀನ್ ಹೇಳಿದ್ದಾರೆ,(ಏಜೆನ್ಸೀಸ್).
ರುದ್ರಾಕ್ಷಿ ಧರಿಸುವ ಮುನ್ನ ಈ 9 ವಿಷಯಗಳು ನಿಮ್ಮ ಗಮನದಲ್ಲಿರಲಿ! ಇಂತಹ ತಪ್ಪುಗಳು ಆಗದಿರಲಿ… | Rudraksha