VIDEO| ಹಾಡು ಹಾಡುತ್ತಾ ಮಗಳನ್ನು ಸಂತೈಸಿದ ರೋಹಿತ್​ ಶರ್ಮಾ

ನವದೆಹಲಿ: ಎಲ್ಲೆಡೆ ಐಪಿಎಲ್​ ಹವಾ ಜೋರಾಗಿ ಬೀಸುತ್ತಿದ್ದು, ಆಟಗಾರರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಇದರ ನಡುವೆ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ತಮ್ಮ ಮುದ್ದಿನ ಮಗಳೊಂದಿಗೆ ಬಿಡುವಿನ ಸಮಯ ಕಳೆದಿದ್ದಾರೆ.

ತಮ್ಮ ಎರಡು ತಿಂಗಳ ಮಗಳಾದ ಸಮೈರಾಳಿಗಾಗಿ ರೋಹಿತ್​, ರಣವೀರ್​ ಸಿಂಗ್​ ಅಭಿನಯದ ಗಲ್ಲಿ ಬಾಯ್​ ಚಿತ್ರದ ‘ಅಸ್ಲಿ ಹಿಪ್​ ಹಪ್​’ ಎಂಬ ರ‍್ಯಾಪ್​​ ಸಾಂಗ್​ ಹಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಾವೆಲ್ಲರೂ ನಮ್ಮಲ್ಲಿ ಸ್ವಲ್ಪಮಟ್ಟಿಗೆ ಗಲ್ಲಿ ಬಾಯ್​ ತನವನ್ನು ಹೊಂದಿದ್ದೇವೆ ಎಂದು ರೋಹಿತ್​ ವಿಡಿಯೋಗೆ ಕ್ಯಾಪ್ಸನ್​ ಬರೆದುಕೊಂಡಿದ್ದಾರೆ. ತಮ್ಮ ಎರಡು ಕೈಗಳಲ್ಲಿ ಸಮೈರಾಳನ್ನು ಎತ್ತಿ ಹಿಡಿದುಕೊಂಡು ಹಾಡನ್ನು ಹಾಡುತ್ತಾ ರೋಹಿತ್​ ತಮ್ಮ ಮಗಳನ್ನು ಸಂತೈಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *