ಸುಮಲತಾ ಪರ ಹೇಳಿಕೆ ಖಂಡಿಸಿ ರಾಕ್​ಲೈನ್​ ವೆಂಕಟೇಶ್​ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

ಬೆಂಗಳೂರು: ನಟ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕ ಟೇಶಿ ವೆಂಕಟೇಶ್ ಎಂಬುವರಿಂದ ಬುಧವಾರ ದೂರು ದಾಖಲಾಗಿದೆ.

ಇಡೀ ಚಿತ್ರರಂಗ ನಟಿ ಸುಮಲತಾ ಪರವಾಗಿದೆ ಎಂಬ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಟೇಶಿ ವೆಂಕಟೇಶ್​, ಚಿತ್ರರಂಗ ಯಾರದೋ ಒಬ್ಬರ ಆಸ್ತಿಯಲ್ಲ. ಚಿತ್ರರಂಗಕ್ಕಾಗಿ ಸಾವಿರಾರು ಜನರು ಶ್ರಮಿಸಿದ್ದಾರೆ. ಒಬ್ಬ ವ್ಯಕ್ತಿಯಿಂದ ಚಿತ್ರರಂಗವನ್ನು ಹೈಜಾಕ್​ ಮಾಡಲು ಸಾಧ್ಯವಿಲ್ಲ. ಅವರಿಗೆ ಆಸಕ್ತಿ ಇದ್ದಿದ್ದರೆ, ಸಭೆ ಕರೆದು ಎಲ್ಲರ ಬಳಿ ಅಭಿಪ್ರಾಯ ಕೇಳಬೇಕಿತ್ತು ಎಂದು ಹೇಳಿದರು.

ಮಾತೃ ಸಂಸ್ಥೆ ವಾಣಿಜ್ಯ ಮಂಡಳಿಯ ಅನುಮತಿಯಿಲ್ಲದೆ ಇಡೀ ಚಿತ್ರರಂಗ ಸುಮಲತಾ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ. ಯಾರೋ ಒಬ್ಬ ವ್ಯಕ್ತಿಯಿಂದ ವಾಣಿಜ್ಯ ಮಂಡಳಿ ಕೆಲಸ ಮಾಡುತ್ತದೆ ಎಂದರೆ ತಪ್ಪಾಗುತ್ತದೆ. ಮುಖ್ಯಮಂತ್ರಿ ಬದಲಾಗುತ್ತಿರುತ್ತಾರೆ. ಪ್ರತಿ ಬಾರಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬಳಿ ಹೋಗಬೇಕಾಗುತ್ತದೆ. ಒಬ್ಬರ ಹಿಂದೆ ಹೋದಾಗ ಅದು ಎಷ್ಟು ಸರಿ?ಇಂತಹ ಹೇಳಿಕೆಯಿಂದ ಚಿತ್ರರಂಗ ಇಬ್ಭಾಗವಾಗುತ್ತದೆ ಎಂದು ಖಂಡಿಸಿದರು.

ರಾಕ್​ಲೈನ್​ ಹೇಳಿಕೆ ಸರಿಯಲ್ಲ
ಸುಮಲತಾ ಅವರಿಗೆ ಇಡೀ ಚಿತ್ರರಂಗ ಬೆಂಬಲವಿದೆ ಎಂಬ ರಾಕ್​ಲೈನ್ ವೆಂಕಟೇಶ್ ಅವರ ಹೇಳಿಕೆಯನ್ನು ಖಂಡಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಅವರು ಪ್ರಚಾರ ಮಾಡಿರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ನೋಟಿಸ್ ನೀಡಬೇಕು ಎಂದು ಟೇಶಿ ವೆಂಕಟೇಶ್​ ಅವರು ದೂರು ನೀಡಿದ್ದಾರೆ. ಅವರ ದೂರನ್ನು ಸ್ವೀಕರಿಸಿದ್ದೇವೆ. ಈ ಬಗ್ಗೆ ಮಾ.29ರ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

One Reply to “ಸುಮಲತಾ ಪರ ಹೇಳಿಕೆ ಖಂಡಿಸಿ ರಾಕ್​ಲೈನ್​ ವೆಂಕಟೇಶ್​ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು”

  1. ಠಿಸಿ ವೆಂಕಟೇಶ್ ತಾಕತ್ ಇದ್ರೆ ಬನ್ನಿ ಇಲ್ಲಾ ಅಂದ್ರೆ ಮನೆಯಲ್ಲಿ ಸೀರೆ ಉಟ್ಟು kutuko

Comments are closed.