ರಾಕಿಂಗ್ ಸ್ಟಾರ್ ಕೊಟ್ರು ಮತ್ತೊಂದು ಸಿಹಿ ಸುದ್ದಿ, ಆಯ್ರಾ ಯಶ್‌ಗೆ ತಂಗಿನಾ, ತಮ್ಮಾನಾ?

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಪುತ್ರಿಗೆ ಮೊನ್ನೆಯಷ್ಟೇ ನಾಮಕರಣ ಮಾಡುವ ಮೂಲಕ ಆಯ್ರಾ ಎಂದು ಹೆಸರಿಟ್ಟಿದ್ದರು. ಇದೇ ಬೆನ್ನಲ್ಲೇ ಸ್ಟಾರ್‌ ದಂಪತಿ ಮತ್ತೊಂದು ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ನಾಮಕರಣದ ದಿನದಂದು ಎದ್ದಿದ್ದ ಅನುಮಾನಕ್ಕೆ ಇದೀಗ ಉತ್ತರ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಮತ್ತೊಂದು ಬೇಬಿ ನಿರೀಕ್ಷೆಯಲ್ಲಿ ಯಶ್ ಮತ್ತು ರಾಧಿಕಾ ಇದ್ದಾರೆ.

ರಾಧಿಕಾ ಈಗ ಗರ್ಭಿಣಿ ಆಗಿದ್ದು, ರಾಕಿಭಾಯ್‌ ಎರಡನೇ ಮಗುವಿಗೆ ತಂದೆ ಆಗುತ್ತಿದ್ದಾರೆ. ಮೊನ್ನೆ ಮಗಳು ಆಯ್ರಾ ನಾಮಕರಣದಲ್ಲಿ ಬಿಡುಗಡೆ ಆಗಿದ್ದ ವಿಡಿಯೋ ನೋಡಿ ಎಲ್ಲರೂ ರಾಧಿಕಾ ಮತ್ತೆ ಗರ್ಭಿಣಿ ಆಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಆದರೀಗ ಅಫಿಶಿಯಲ್ ಆಗಿ ಪೋಸ್ಟ್ ಮಾಡುವ ಮೂಲಕ ಯಶ್‌ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *