ರಾಕಿಂಗ್‌ ಸ್ಟಾರ್‌ ಯಶ್‌ ಈಗ ಅಪ್ಪ ಆಗ್ತಿದಾರೆ….!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡಿದ್ದ ನಟ ಯಶ್‌ ಮತ್ತು ನಟಿ ರಾಧಿಕಾ ಪಂಡಿತ್‌ ನಿಜ ಜೀವನದಲ್ಲೂ ಜೋಡಿಯಾಗಿದ್ದು ಹಳೇ ಸುದ್ದಿ. ಆದರೀಗ ಯಶ್‌ ಮತ್ತು ರಾಧಿಕಾ ಪಂಡಿತ್‌ ಹೊಸ ಸುದ್ದಿಯೊಂದನ್ನು ರಿವೀಲ್‌ ಮಾಡಿದ್ದಾರೆ.

ಅದೇನು ಅಂದರೆ, ಯಶ್‌ ಈಗ ತಂದೆಯಾಗುತ್ತಿದ್ದಾರೆ. ಈ ಕುರಿತು ಸ್ವತಃ ಯಶ್‌ ಫೇಸ್‌ಬುಕ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದು, ತಾನು ತಂದೆಯಾಗುತ್ತಿರುವುದಾಗಿ ಅಭಿಮಾನಿಗಳ ಜತೆ ಖುಷಿ ಹಂಚಿಕೊಂಡಿದ್ದಾರೆ.

😇😇😇

Yash ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 24, 2018

ಇದಲ್ಲದೇ ರಾಧಿಕಾ ಪಂಡಿತ್‌ ಕೂಡ ಫೇಸ್‌ಬುಕ್‌ನಲ್ಲಿ ಫೋಟೊ ಪೋಸ್ಟ್‌ ಮಾಡುವ ಮೂಲಕ ಇನ್ಮುಂದೆ ನಾವು ಮೂವರು ಎಂದು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ವಿಶೇಷ ಅಂದರೆ ಯಶ್‌ ಮತ್ತು ರಾಧಿಕಾ ಮದುವೆಯಾಗಿ ಡಿಸೆಂಬರ್‌ಗೆ ಎರಡು ವರ್ಷ ಅಗುತ್ತದೆ. ಈ ಹೊತ್ತಿನಲ್ಲೇ ಇಬ್ಬರು ಗುಡ್‌ ನ್ಯೂಸ್‌ ಹೇಳಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. (ದಿಗ್ವಿಜಯ ನ್ಯೂಸ್)