ಬೇರೆ ಭಾಷೆಗೆ ಹೋಗಲ್ಲ… ಇಲ್ಲೇ ಇರ್ತೀನಿ: ಯಶ್​

ಬೆಂಗಳೂರು: ನಾನು ಬೇರೆ ಭಾಷೆಗೆ ಹೋಗುವುದಿಲ್ಲ, ನನಗೆ ಕನ್ನಡಿಗರೇ ಎಲ್ಲವನ್ನೂ ಕೊಟ್ಟಿದ್ದಾರೆ. ಇಂದು ನಾನೇನೇ ಆಗಿದ್ದರೂ ಅದಕ್ಕೆ ಕನ್ನಡಿಗರ ಪ್ರೀತಿ, ಅಭಿಮಾನವೇ ಕಾರಣ ಎಂದು ರಾಕಿಂಗ್​ ಸ್ಟಾರ್​ ಯಶ್​ ತಿಳಿಸಿದ್ದಾರೆ.

ಕೆ.ಜಿ.ಎಫ್​ ಚಿತ್ರ ಬಿಡುಗಡೆಯಾದ ನಂತರ ಯಶ್​ ಶುಕ್ರವಾರ ಸಂಜೆ ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ಚಿತ್ರತಂಡದ ಜತೆ ಒರಾಯನ್​ ಮಾಲ್​ನಲ್ಲಿ ಚಿತ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಇಷ್ಟು ದಿನ ಕನ್ನಡ ಚಿತ್ರವೊಂದರ ಗಳಿಕೆ ನೂರು ಕೋಟಿ ರೂ. ಗಡಿ ದಾಟುತ್ತೆ ಎಂದು ಮಾತನಾಡಿಕೊಳ್ಳುವುದು ಕಟ್ಟು ಕತೆ ಆಗಿತ್ತು. ಆದರೆ ಅದು ಈಗ ನಿಜವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ನಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿ ಒಂದು ತಿಂಗಳು ಕೂಡ ಆಗಿಲ್ಲ. ಡಾಕ್ಟರ್​ ರಾಧಿಕಾಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಅವರು ಇನ್ನೂ ಸಿನಿಮಾ ನೋಡಿಲ್ಲ. ಸ್ವಲ್ಪ ತಡವಾಗಿ ಪತ್ನಿ ಮತ್ತು ಮಗಳಿಗೆ ಸಿನಿಮಾ ತೋರಿಸುತ್ತೇನೆ ಎಂದು ಯಶ್​ ಹೇಳಿದ್ದಾರೆ.

ಕೆ.ಜಿ.ಎಫ್​. ಚಿತ್ರ ಬಿಡುಗಡೆಯಾದ ಐದೂ ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲೂ ದಾಖಲೆ ನಿರ್ಮಿಸಿದೆ. ಹಾಗಾಗಿ ಚಿತ್ರತಂಡ ಚಿತ್ರಕ್ಕೆ ಮತ್ತಷ್ಟು ಅಡ್ವಾನ್ಸ್​ ಸೌಂಡ್​ ಎಫೆಕ್ಟ್ಸ್​ ಅಳವಡಿಸಿದ್ದು, ಚಿತ್ರ ಮತ್ತಷ್ಟು ರಿಚ್​ ಆಗಿದೆ.

One Reply to “ಬೇರೆ ಭಾಷೆಗೆ ಹೋಗಲ್ಲ… ಇಲ್ಲೇ ಇರ್ತೀನಿ: ಯಶ್​”

Leave a Reply

Your email address will not be published. Required fields are marked *