ಚುನಾವಣೆ ಪ್ರಚಾರಕ್ಕೆ ನಟ ರಾಕಿಂಗ್‌ ಸ್ಟಾರ್‌ ಯಶ್‌ ಎಂಟ್ರಿ

ಮೈಸೂರು: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಅಂಗವಾಗಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ರಂಗೇರುತ್ತಿದ್ದು, ರಾಜಕೀಯ ಅಖಾಡಕ್ಕೆ ಸ್ಟಾರ್​ ಕ್ಯಾಂಪೇನರರ್ಸ್‌ಗಳ ಎಂಟ್ರಿಯಾಗಿದೆ.

ಬಿಜೆಪಿ, ಜೆಡಿಎಸ್​ ಅಭ್ಯರ್ಥಿಗಳ ಪರ ನಟ ರಾಕಿಂಗ್​ ಸ್ಟಾರ್ ಯಶ್​ ಪ್ರಚಾರ ಕಾರ್ಯಕೈಗೊಳ್ಳಲಿದ್ದಾರೆ. ಮೈಸೂರಿನಲ್ಲಿ ಬೆಳಗ್ಗೆ ಕೃಷ್ಣರಾಜನಗರದ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್​ ಪರ ಯಶ್​ ಪ್ರಚಾರ ಮಾಡಲಿದ್ದು, ಸಂಜೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಎ.ರಾಮದಾಸ್​ ಪರ ಮತಯಾಚನೆ ಮಾಡಲಿದ್ದಾರೆ.

ಸಂಜೆ 5ಗಂಟೆಗೆ ಗನ್‌ ಹೌಸ್‌ ವೃತ್ತದಿಂದ ನಡೆಯಲಿರುವ ರ್ಯಾಲಿಯಲ್ಲಿ ಯಶ್‌ ಪಾಲ್ಗೊಳ್ಳಲಿದ್ದಾರೆ.

ಸಿಎಂ ಪರವಾಗಿ ಸಿನಿಮಾ ವಲಯದ ಮುಖಂಡರ ಪ್ರಚಾರ

ಇನ್ನು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿಎಂ ಸಿದ್ದರಾಮಯ್ಯ ಪರವಾಗಿ ಸಿನಿಮಾ ವಲಯದ ಕಾಂಗ್ರೆಸ್ ಮುಖಂಡರು ಪ್ರಚಾರಕ್ಕೆ ಇಳಿಯಲಿದ್ದಾರೆ. ಜಯಮಾಲಾ, ಮುಖ್ಯಮಂತ್ರಿ ಚಂದ್ರು ಹಾಗೂ ರಾಜೇಂದ್ರಸಿಂಗ್ ಬಾಬು ಮತ್ತಿತರರು ಸಿದ್ದಲಿಂಗಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್)

 

Leave a Reply

Your email address will not be published. Required fields are marked *