ಯಶ್​ರ ಹೊಸ ರಾಮಾಯಣದ ಹೊಸ ಹೊಸ ವಿಚಾರಗಳು; ನಿಮಗೆಷ್ಟು ಗೊತ್ತು?

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಹು ನಿರೀತ ಭಾರತೀಯ ಸಿನಿಮಾಗಳಲ್ಲಿ “ದಂಗಲ್​’ ಖ್ಯಾತಿಯ ನಿರ್ದೇಶಕ ನಿತೇಶ್​ ತಿವಾರಿ ಆ್ಯಕ್ಷನ್-&ಕಟ್​ ಹೇಳುತ್ತಿರುವ ಯಶ್​, ರಣಬೀರ್​ ಕಪೂರ್​, ಸಾಯಿಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ “ರಾಮಾಯಣ’ ಮೊದಲ ಸಾಲಿನಲ್ಲಿದೆ. ಇದುವರೆಗೆ ಚಿತ್ರದ ಬಗ್ಗೆ ಆಗೊಂದು, ಈಗೊಂದು ಸುದ್ದಿಗಳು ಹರಿದಾಡುತ್ತಿದ್ದರೂ, ಇದುವರೆಗೆ ಅಧಿಕೃತವಾಗಿ ಹೆಚ್ಚು ಮಾಹಿತಿ ಘೋಷಣೆಯಾಗಿರಲಿಲ್ಲ. ಇದೀಗ ಮೂರು ನಿಮಿಷಗಳ ಟೀಸರ್​ ಬಿಡುಗಡೆ ಮಾಡಿರುವ ಚಿತ್ರತಂಡ ಎಲ್ಲ ಅಂತೆ&ಕಂತೆಗಳಿಗೂ ಬ್ರೇಕ್​ ಹಾಕಿದ್ದು, ಅದ್ಭುತ ತಾರಾಗಣ ಮತ್ತು ಅದ್ವೀತಿಯ ತಂತ್ರಜ್ಞರ ಮೂಲಕ ಮತ್ತಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರ ಮೂಲಕ ಆರಂಭವಾಗುವ ಟೀಸರ್​ನ ಕೊನೆಯಲ್ಲಿ ರಾಮ ಮತ್ತು ರಾವಣರ ದರ್ಶನ ಮಾಡಿಸಿದ್ದು, ರಣಬೀರ್​ ಕಪೂರ್​ ಮತ್ತು ಯಶ್​ ಲುಕ್​ ಕುತೂಹಲ ಹೆಚ್ಚಿಸಿದೆ. ಹಾಗೇ “ರಾಮಾಯಣ’ ಟೈಟಲ್​ಗೆ “ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಅಡಿಬರಹವಿದ್ದು, ನೈಜತೆಗೆ ಹತ್ತಿರವಾಗಿಯೇ ಘಟನೆಗಳನ್ನು ರೂಪಿಸುವ ನಿರೀಕ್ಷೆ ಇದೆ.

ಹಾನ್ಸ್​ ಜಿಮ್ಮರ್​ & ಎ.ಆರ್​.ರೆಹ್ಮಾನ್​ ಸಂಗೀತದ ಮೋಡಿ:

ಯಶ್​ರ ಹೊಸ ರಾಮಾಯಣದ ಹೊಸ ಹೊಸ ವಿಚಾರಗಳು; ನಿಮಗೆಷ್ಟು ಗೊತ್ತು?
ಹಾಲಿವುಡ್​ನ ಹೆಸರಾಂತ ಸಂಗೀತ ನಿರ್ದೇಶಕ ಹಾನ್ಸ್​ ಜಿಮ್ಮರ್​ ಮತ್ತು ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್​.ರೆಹ್ಮಾನ್​ “ರಾಮಾಯಣ’ ಚಿತ್ರದ ಸಂಗೀತಕ್ಕೆ ಕೈಜೋಡಿಸಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಹಾಡುಗಳಿಗೆ ರೆಹ್ಮಾನ್​ ಸಂಗೀತ ನೀಡಲಿದ್ದು, ಬಿಜಿಎಂ ಜವಾಬ್ದಾರಿಯನ್ನು ಹಾನ್ಸ್​ ಜಿಮ್ಮರ್​ ಹೊತ್ತಿದ್ದಾರೆ ಎನ್ನಲಾಗಿದೆ. ವಿಶೇಷ ಅಂದರೆ ಹಾನ್ಸ್​ ಈ ಹಿಂದೆ “ದ ಲಯನ್​ ಕಿಂಗ್​’ ಮತ್ತು “ಡ್ಯೂನ್​’ ಚಿತ್ರಗಳಿಗೆ ಎರಡು ಬಾರಿ ಆಸ್ಕರ್​ ಪ್ರಶಸ್ತಿ ಪಡೆದಿದ್ದರೆ, ರೆಹ್ಮಾನ್​ ಕೂಡ “ಸ್ಲಂಡಾಗ್​ ಮಿಲೇನಿಯರ್​’ ಚಿತ್ರದ ಹಿನ್ನೆಲೆ ಸಂಗೀತ ಮತ್ತು “ಜೈ ಹೋ’ ಹಾಡಿಗೆ ಡಬಲ್​ ಆಸ್ಕರ್​ ಪಡೆದಿದ್ದರು. ಇದೀಗ ವಿಶ್ವವಿಖ್ಯಾತ ಇಬ್ಬರು ಸಂಗೀತಗಾರರು “ರಾಮಾಯಣ’ ಚಿತ್ರಕ್ಕಾಗಿ ಕೈಜೋಡಿಸಿರುವುದು ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.

ಪ್ಯಾನ್​ ವರ್ಲ್ಡ್​ ಸಿನಿಮಾ

ಯಶ್​ರ ಹೊಸ ರಾಮಾಯಣದ ಹೊಸ ಹೊಸ ವಿಚಾರಗಳು; ನಿಮಗೆಷ್ಟು ಗೊತ್ತು?
“ರಾಮಾಯಣ’ ಪ್ಯಾನ್​ ವರ್ಲ್ಡ್​ ಚಿತ್ರವಾಗಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಭಾರತೀಯ ಭಾಷೆಗಳ ಜತೆಗೆ ಇಂಗ್ಲೀಷ್​ ಹಾಗೂ ವಿವಿಧ ವಿದೇಶಿ ಭಾಷೆಗಳಲ್ಲೂ ಮೂಡಿಬರಲಿದೆ ಎನ್ನಲಾಗಿದೆ. ಹೀಗಾಗಿಯೇ ಭಾರತ, ಭಾರತೀಯರ ಕಣಕಣದಲ್ಲೂ ಸೇರಿರುವ ಈ ಪೌರಾಣಿಕ ಕಥೆಯನ್ನು ವಿಶ್ವಾದ್ಯಂತ ಜನರಿಗೆ ಮುಟ್ಟಿಸಲು ಯೂನಿವರ್ಸಲ್​ ಆಗಿ ಕೆಲ ಬದಲಾವಣೆ ಮಾಡಿರುವ ಸಾಧ್ಯತೆ ಇದೆ. ಏಕೆಂದರೆ ಚಿತ್ರಕ್ಕೆ “ಖಾಕಿ’, “ವಾರ್​’, “ಪಠಾಣ್​’ ಸೇರಿ ಹಲವು ಹಿಟ್​ ಚಿತ್ರಗಳಿಗೆ ಕಥೆ ಬರೆದಿರುವ “ಅಪಹರಣ್​’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಕಥೆಗಾರ ಶ್ರೀಧರ್​ ರಾವನ್​ “ರಾಮಾಯಣ’ ಚಿತ್ರಕಥೆ ಬರೆದಿದ್ದಾರೆ.

ಎರಡು ಭಾಗ, 835 ಕೋಟಿ ಬಜೆಟ್​!

ಯಶ್​ರ ಹೊಸ ರಾಮಾಯಣದ ಹೊಸ ಹೊಸ ವಿಚಾರಗಳು; ನಿಮಗೆಷ್ಟು ಗೊತ್ತು?
“ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, 2026ರ ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ರಿಲೀಸ್​ ಆಗಲಿವೆ. ಅಂದಹಾಗೆ ಈ ಪೌರಾಣಿಕ ಚಿತ್ರ, ಬಜೆಟ್​ ವಿಷಯದಲ್ಲೂ ಇತಿಹಾಸ ನಿರ್ಮಿಸಿದೆ. ಬರೋಬ್ಬರಿ <835 ಕೋಟಿ ಬಜೆಟ್​ನೊಂದಿಗೆ ಇದುವರೆಗಿನ ಭಾರತದ ಅತಿ ದೊಡ್ಡ ಬಜೆಟ್​ ಸಿನಿಮಾ ಎಂಬ ದಾಖಲೆ ಮಾಡಿರುವ “ರಾಮಾಯಣ’ ಚಿತ್ರವನ್ನು ನಮಿತ್​ ಮಲ್ಹೋತ್ರಾ ಮತ್ತು ಯಶ್​ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ದಿಗ್ಗಜರ ಸಮ್ಮಿಲನ

ಯಶ್​ರ ಹೊಸ ರಾಮಾಯಣದ ಹೊಸ ಹೊಸ ವಿಚಾರಗಳು; ನಿಮಗೆಷ್ಟು ಗೊತ್ತು?
“ರಾಮಾಯಣ’ದಲ್ಲಿ ಭಾರತದ ವಿವಿಧ ಚಿತ್ರರಂಗಗಳ ದಿಗ್ಗಜ ಕಲಾವಿದರು ನಟಿಸುತ್ತಿದ್ದಾರೆ. ಕನ್ನಡಿಗ ಯಶ್​ ರಾವಣನಾಗಿದ್ದರೆ, ಬಾಲಿವುಡ್​ ನಟರಾದ ರಣಬೀರ್​ ರಾಮನಾಗಿ, ಸನ್ನಿ ಡಿಯೋಲ್​ ಹನುಮಂತ ಮತ್ತು ರವಿ ದುಬೇ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಮಲಯಾಳಂ ನಟಿ ಸಾಯಿಪಲ್ಲವಿ ಸೀತೆಯಾಗಿದ್ದು, ಬಹುಭಾಷಾ ಕಲಾವಿದರಾದ ವಿವೇಕ್​ ಓಬೆರಾಯ್​, ರಕುಲ್​ ಪ್ರೀತ್​ ಸಿಂಗ್​, ಕಾಜಲ್​ ಅಗರ್ವಾಲ್​ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜತೆಗೆ ಕುಣಾಲ್​ ಕಪೂರ್​, ಅರುಣ್​ ಗೋವಿಲ್​ ಸೇರಿ ಹಲವು ದಿಗ್ಗಜ ಕಲಾವಿದರು ತಾರಾಗಣದಲ್ಲಿದ್ದಾರೆ. ಹಾಗೇ ಹಾಲಿವುಡ್​ನ ಹೆಸರಾಂತ ಸಂಗೀತ ನಿರ್ದೇಶಕ ಹಾನ್ಸ್​ ಜಿಮ್ಮರ್​ ಜತೆಗೆ ಟೆರ್ರಿ ನೋಟರಿ ಮತ್ತು ಗಯ್​ ನೋರಿಸ್​ ಸಾಹಸ ನಿರ್ದೇಶನವಿರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕ ನಮಿತ್​ ಮಲ್ಹೋತ್ರಾ ಒಡೆತನದ ಲಂಡನ್​ ಮೂಲದ ವಿಎಫ್​ಎಕ್ಸ್​ ಸಂಸ್ಥೆ “ಟೆನೆಟ್​’, “ಡ್ಯೂನ್​’ ಸರಣಿ, “ಇಂಟರ್​ಸ್ಟೆಲ್ಲಾರ್​’ ಸೇರಿ ಎಂಟು ಚಿತ್ರಗಳಿಗೆ ಅತ್ಯುತ್ತಮ ವಿಎಫ್​ಎಕ್ಸ್​ ಆಸ್ಕರ್​ ಪ್ರಶಸ್ತಿ ಪಡೆದಿರುವ ಡಿಎನ್​ಇಜಿ “ರಾಮಾಯಣ’ದ ವಿಎ್​ಎಕ್ಸ್​ ಜವಾಬ್ದಾರಿ ನಿಭಾಯಿಸುತ್ತಿದೆ.

 

Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…