ಕೆಜಿಎಫ್​ ನಂತರ ಯಶ್​ ಮುಂದಿನ ಸಿನಿಮಾ ಯಾವುದು ಗೊತ್ತಾ?

ಬೆಂಗಳೂರು: ಸುಮಾರು ಎರಡು ವರ್ಷಗಳಿಂದ ಕೆಜಿಎಫ್​ ಚಿತ್ರದಲ್ಲೇ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್​ನ ಮುಂದಿನ ಚಿತ್ರ ಅತೀ ಶೀಘ್ರದಲ್ಲೇ ಸೆಟ್ಟೇರಲಿದೆ.

ಯಶ್​ ಅಪ್ ಕಮಿಂಗ್ ಸಿನಿಮಾಗೆ ಮಹೂರ್ತ ಫಿಕ್ಸ್ ಆಗಿದ್ದು, ನಿರ್ದೇಶಕ ಅನಿಲ್ ಕುಮಾರ್ ಆ್ಯಕ್ಷನ್ ಕಟ್ ಹೇಳಲಿರುವ ಹೊಸ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೆಟ್ಟೇರಲಿದೆ ಎನ್ನಲಾಗಿದೆ.

ಅಂದಹಾಗೆ, ಯಶ್​ ಮುಂಬರುವ ಚಿತ್ರಕ್ಕೆ ‘ಕಿರಾತಕ-2’ ಎಂದು ಹೆಸರಿಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಮುಹೂರ್ತ ಆದ ಎರಡನೆಯ ದಿನದಿಂದಲೇ ಚಿತ್ರೀಕರಣಕ್ಕೂ ಕಿಕ್ ಸ್ಟಾರ್ ನೀಡಲಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)