More

    ರಾಕಿಭಾಯ್​ ಬರ್ತ್​ಡೆಗೆ ಕ್ಷಣಗಣನೆ: ದಾಖಲೆಯ 5000 ಕೆ.ಜಿ. ಕೇಕ್​ನಲ್ಲಿ ಮಿಶ್ರಣ ಮಾಡಿರೋ ಪದಾರ್ಥಗಳ ಪಟ್ಟಿ ಹೀಗಿದೆ…

    ಬೆಂಗಳೂರು: ನಟ ರಾಕಿಂಗ್​ ಸ್ಟಾರ್​ ಯಶ್​ ಬರ್ತ್​ಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ 34ನೇ ವಸಂತಕ್ಕೆ ನಟ ಯಶ್​ ಕಾಲಿಡುತ್ತಿದ್ದು, ಅಭಿಮಾನಿಗಳೆಲ್ಲ ಸೇರಿ ಈ ಬಾರಿ ರಾಕಿಭಾಯ್​ ಹುಟ್ಟುಹಬ್ಬವನ್ನು ಭರ್ಜರಿಯಿಂದ ಆಚರಿಸುವುದರೊಂದಿಗೆ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

    ಕೆ.ಜಿ.ಎಫ್​ ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್​ ಆಗಿರುವ ನೆಚ್ಚಿನ ನಟನ ಬರ್ತ್​ಡೆಗೆ ಬಿಗ್​ ಸರ್ಪ್ರೈಸ್​ ನೀಡಲು ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಇದಕ್ಕಾಗಿ ಬರೋಬ್ಬರಿ 5ಸಾವಿರ ಕೆಜಿ ಕೇಕ್ ಹಾಗೂ 216 ಅಡಿ ಕಟೌಟ್ ಸಿದ್ಧತೆ ಭರದಿಂದ ಸಾಗುತ್ತಿದ್ದು, ಇಂದು ರಾತ್ರಿ 12ಗಂಟೆಗೆ ಯಶ್ ಕತ್ತರಿಸಲಿರುವ ಕೇಕ್​ ದಾಖಲೆಯ ಕೇಕ್ ಆಗಿರಲಿದೆ.

    ವೇಣು ಗೌಡ ಎಂಬುವರ ನೇತೃತ್ವದಲ್ಲಿ ಐದು ಸಾವಿರ ಕೆ.ಜಿ ಕೇಕ್ ತಯಾರಿಯಾಗಿದೆ. ನಾಳೆ ನಂದಿ ಲಿಂಕ್ ಗ್ರೌಂಡ್​ನಲ್ಲಿ ಯಶ್ ಹುಟ್ಟು ಹಬ್ಬ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ವೇಣು ಗೌಡ, ಯಶ್ ಹೆಸರಿನಲ್ಲಿ ಬಡವರಿಗೆ ಬೆಡ್ ಶೀಟ್ ಹಾಗೂ ಹಣ್ಣುಗಳನ್ನು ದಾನ ಮಾಡಿದ್ದಾರೆ.

    ದಾಖಲೆಯ ಕೇಕ್​ನಲ್ಲಿ ಏನೇನಿದೆ?
    ಸ್ಯಾಂಡಲ್​ವುಡ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಟನೊಬ್ಬನ ಹುಟ್ಟುಹಬ್ಬಕ್ಕಾಗಿ ಬರೋಬ್ಬರಿ 5 ಸಾವಿರ ಕೆ.ಜಿ ಕೇಕ್​ ತಯಾರಿಸಲಾಗಿದೆ. ಈ ಬೃಹದಾಕಾರದ ಕೇಕ್​ಗೆ ಏನೆಲ್ಲಾ ಪದಾರ್ಥಗಳನ್ನು ಹಾಕಿರಬಹುದು ಎಂಬ ಕುತೂಹಲ ಸಹಜವಾಗಿಯೇ ಜನರಲ್ಲಿ ಮೂಡಿದೆ. ಹೀಗಾಗಿ ನಿಮ್ಮ ಕುತೂಹಲ ತಣಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

    1. ಮೊಟ್ಟೆ- 2000 ಕೆ.ಜಿ.
    2. ಸಕ್ಕರೆ- 500 ಕೆ.ಜಿ.
    3. ಐಸಿಂಗ್​ ಸುಗರ್​- 600 ಕೆ.ಜಿ.
    4. ತುಪ್ಪ- 50 ಕೆ.ಜಿ.
    5. ಬೆಣ್ಣೆ- 10 ಕೆ.ಜಿ.
    6. ವೆನಿಲ್ಲಾ ಎಸೆನ್ಸ್​- 20 ಲೀಟರ್​
    7. ಪೈನಾಪಲ್​ ಎಸೆನ್ಸ್​- 20 ಲೀಟರ್​
    8. ಕೇಕ್​ ಜೆಲ್​- 200 ಕೆ.ಜಿ.
    9. ಹಾಲಿನ ಪೌಡರ್​- 40 ಕೆ.ಜಿ.
    10. ರೀಫೈನ್ಡ್​ ಎಣ್ಣೆ- 500 ಕೆ.ಜಿ.
    11, ವೆಜಿಟೇಬಲ್​ ಫ್ಯಾಟ್​- 540 ಕೆ.ಜಿ.
    12. ಮೈದಾ- 500 ಕೆ.ಜಿ.
    13. ಜಾಮ್​- 10 ಕೆ.ಜಿ.
    14. ಬಟರ್​ಸ್ಕಾಚ್​ ನಟ್​- 20 ಕೆ.ಜಿ.
    15. ಉಪ್ಪು- 2 ಕೆ.ಜಿ.
    ಒಟ್ಟಾರೆ ಕೇಕ್​ 5012 ಕೆ.ಜಿ. ತೂಕವಿದೆ. ಈ ಮೇಲಿನ ಪದಾರ್ಥಗಳು ಮಾತ್ರವಲ್ಲದೆ ಒಣಹಣ್ಣುಗಳು ಸೇರಿದಂತೆ ಬಗೆ ಬಗೆಯ ಹಣ್ಣುಗಳನ್ನು ಸಹ ಕೇಕ್​ಗೆ ಬಳಸಲಾಗಿದೆ. (ದಿಗ್ವಿಜಯ ನ್ಯೂಸ್​)

    ರಾಕಿಭಾಯ್​ ಬರ್ತ್​ಡೆಗೆ ಕ್ಷಣಗಣನೆ: ದಾಖಲೆಯ 5000 ಕೆ.ಜಿ. ಕೇಕ್​ನಲ್ಲಿ ಮಿಶ್ರಣ ಮಾಡಿರೋ ಪದಾರ್ಥಗಳ ಪಟ್ಟಿ ಹೀಗಿದೆ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts