ರಾಧಿಕಾ ಬಯಕೆ ಈಡೇರಿಸಿದ ಯಶ್​..

ಬೆಂಗಳೂರು: ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ತುಂಬು ಗರ್ಭಿಣಿಯಾಗಿದ್ದು ಪತಿ ರಾಕಿಂಗ್​ಸ್ಟಾರ್​ ಯಶ್​ ಅವರ ಎಲ್ಲ ಬಯಕೆಗಳನ್ನು ಈಡೇರಿಸುತ್ತಿದ್ದಾರಂತೆ.

ಹೀಗಂತ ಸ್ವತಃ ರಾಧಿಕಾ ಪಂಡಿತ್​ ಹೇಳಿಕೊಂಡಿದ್ದು, ಪತಿ ನನಗಾಗಿ ಶೆಫ್​ ಆಗಿದ್ದಾರೆ ಎಂದು ಇನ್​ಸ್ಟಾಗ್ರಾಂನಲ್ಲಿ ಫೋಟೋಗಳ ಸಮೇತ ಖುಷಿಯಿಂದ ಶೇರ್​ ಮಾಡಿದ್ದಾರೆ.

ನನ್ನ ಪತಿ ಯಾವುದರಲ್ಲಿಯೂ ಹಿಂದೆ ಉಳಿಯದೆ, ನನಗಾಗಿ ಅಡುಗೆ ಮಾಡಲು ಪ್ರಯತ್ನಿಸಿದಾಗ… ಮಿಸ್ಟರ್ ರಾಕಿಂಗ್ ಸ್ಟಾರ್ ಬ್ಯಾಡ್ ಶೆಫ್ ಏನು ಅಲ್ಲ ಎಂದು ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)