ಎಲ್ಲೆಡೆ ಕೆ.ಜಿ.ಎಫ್​. ಹವಾ: ಹೆಲಿಕಾಪ್ಟರ್​ ಮೂಲಕ ರಾಕಿಭಾಯ್​​ ಕಟೌಟ್​ಗೆ ಪುಷ್ಪಾರ್ಚನೆ, ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಬಹುನಿರೀಕ್ಷಿತ ಕೆ.ಜಿ.ಎಫ್​. ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ. ರಾಕಿಂಗ್​​ ಸ್ಟಾರ್​ ಯಶ್​ ಅವರ ಕಟೌಟ್​ಗೆ ಹೆಲಿಕಾಪ್ಟರ್​ ಮೂಲಕ ಪುಷ್ಪಾರ್ಚನೆ ಮಾಡುವುದರೊಂದಿಗೆ ಅಭಿಮಾನಿಗಳು ಚಿತ್ರವನ್ನು ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ.

ನಗರದ ಪ್ರಮುಖ ಚಿತ್ರಮಂದಿರ ನರ್ತಕಿಯಲ್ಲಿ ಕೆ.ಜಿ.ಎಫ್​​. ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಅನ್ನಸಂತರ್ಪಣೆ ಹಾಗೂ ಕ್ಷೀರಾಭಿಷೇಕ ಮೂಲಕ ಸಂಭ್ರಮಿಸುತ್ತಿದ್ದಾರೆ. ವಿಶೇಷ ಅಂದರೆ ನರ್ತಕಿ ಚಿತ್ರಮಂದಿರದಲ್ಲಿರುವ 72 ಅಡಿ ಎತ್ತರದ ಯಶ್ ಕಟೌಟ್​ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಿದ್ದಾರೆ.​

ನಗರದ ನವರಂಗ್​, ಊರ್ವಶಿ, ಚಂದ್ರೋದಯ ಹಾಗೂ ಸಿದ್ದೇಶ್ವರ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದೆ. ಎಲ್ಲ ಚಿತ್ರಮಂದಿರಗಳೂ ಹೂವಿನ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಯಶ್​ ಕಟೌಟ್​ಗೆ ಹೂವಿನ ಹಾರ ಹಾಕಿ ಅಭಿಮಾನಿಗಳು ಕೇಕೆ ಹಾಕಿದ್ದಾರೆ. ಚಿತ್ರದ ನೋಡಿದ ಬಹುತೇಕ ಅಭಿಮಾನಿಗಳು ಚಿತ್ರ ಸೂಪರ್ರೋ ಸೂಪರ್​ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದೆಲ್ಲಡೆ ಕೆ.ಜಿ.ಎಫ್​. ಹವಾ
ಕಲಬುರಗಿಯಲ್ಲಿ ಯಶ್ ಅಭಿಮಾನಿ ಮಹೇಶ್ ವಿ.ಆರ್​. ಚಿತ್ರ ಬಿಡುಗಡೆ ದಿನದಂದೇ ಹೊಸ ಬೈಕ್​ ಖರೀದಿಸಿ ಚಿತ್ರಮಂದಿರದ ಮುಂದೆ ಪೂಜೆ ಸಲ್ಲಿಸಿದ್ದಾನೆ. ಇದೇ ವೇಳೆ ಚಿತ್ರ ನೋಡಲು ಬಂದಿದ್ದ ಪ್ರೇಕ್ಷಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ದಾನೆ. ಕಲಬುರಗಿಯಲ್ಲೂ ಪ್ರೇಕ್ಷಕ ಮಹಾಶಯ ಚಿತ್ರಕ್ಕೆ ಜೈಕಾರ ಹಾಕಿದ್ದಾನೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಧ್ಯರಾತ್ರಿಯೇ ಚಿತ್ರ ಪ್ರದರ್ಶನ ಕಂಡಿದೆ. ಕೋರ್ಟ್ ತಡೆಯಾಜ್ಞೆ ಗೊಂದಲದ ನಡುವೆಯೂ ರಾಕಿ ಭಾಯ್ ಹವಾ ಸೃಷ್ಟಿಸಿದ್ದಾರೆ. ತವರು ನೆಲದಲ್ಲಿ ತೆರೆಗೆ ಅಪ್ಪಳಿಸಿದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗೊಂದಲದ ನಡುವೆಯೂ ಕೆ.ಜಿ.ಎಫ್. ಸಿನಿಮಾ ಕೋಲಾರದಲ್ಲಿ ಬಿಡುಗಡೆಯಾಗಿದೆ. ಕೋಲಾರ ನಗರದ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮುಂಜಾನೆ 5 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದ್ದು, ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ.

ಎಲ್ಲೆಡೆ ಆರ್ಭಟ
5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆ.ಜಿ.ಎಫ್. ಚಿತ್ರ ಸುಮಾರು 2000 ಸ್ಕ್ರೀನ್​ಗಳಲ್ಲಿ ಆರ್ಭಟಿಸುತ್ತಿದೆ. ಕರ್ನಾಟಕದ 350 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ. ಬೆಂಗಳೂರು ಒಂದರಲ್ಲೇ 200 ಸ್ಕ್ರೀನ್​ಗಳಲ್ಲಿ ಕೆ.ಜಿ.ಎಫ್. ಪ್ರದರ್ಶನ ಕಾಣುತ್ತಿದೆ. ಆಂಧ್ರ-ತೆಲಂಗಾಣದಲ್ಲಿ 350, ತಮಿಳುನಾಡಿನಲ್ಲಿ 150, ಕೇರಳದಲ್ಲಿ 75, ಬಾಲಿವುಡ್​ನಲ್ಲಿ 1000 ಹಾಗೂ ವಿದೇಶಗಳಲ್ಲಿ 375 ಚಿತ್ರಮಂದಿರದಲ್ಲಿ ಕೆ.ಜಿ.ಎಫ್. ಪ್ರದರ್ಶನ ಕಾಣುತ್ತಿದ್ದು, ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

ಸಲಾಂ ರಾಕಿ ಬಾಯ್…!! 😍🙏

Worldwide Yash Fans ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಡಿಸೆಂಬರ್ 20, 2018

ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ…!!#KGF #Yash #SrinidhiShetty #PrashanthNeel #HombaleFilms

Worldwide Yash Fans ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಡಿಸೆಂಬರ್ 20, 2018

Worldwide Yash Fans ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಡಿಸೆಂಬರ್ 20, 2018

Worldwide Yash Fans ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಡಿಸೆಂಬರ್ 20, 2018

All the best to Team KGF

All the best to Team K.G.F….

Puneeth Rajkumar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಡಿಸೆಂಬರ್ 20, 2018

One Reply to “ಎಲ್ಲೆಡೆ ಕೆ.ಜಿ.ಎಫ್​. ಹವಾ: ಹೆಲಿಕಾಪ್ಟರ್​ ಮೂಲಕ ರಾಕಿಭಾಯ್​​ ಕಟೌಟ್​ಗೆ ಪುಷ್ಪಾರ್ಚನೆ, ಅಭಿಮಾನಿಗಳ ಸಂಭ್ರಮ”

  1. ಇಂದು ಕನ್ನಡ ಧ್ವಜ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಿತು ಶುಭಾಶಯ
    #yash #kgf #rockybhai
    VijaMK 9448319123

Comments are closed.