ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಯಿಂದ ಮಾರಣಾಂತಿಕ ಹಲ್ಲೆ, ಎದೆ ಝಲ್‌ ಎನಿಸುವ ದೃಶ್ಯ

ಹರಿಯಾಣ: ಬ್ಯಾಂಕ್‌ಗಳಿಗೆ ಹೋಗಬೇಕೆಂದರೆ ಇನ್ಮುಂದೆ ಎಚ್ಚರವಾಗಿರಿ. ಯಾಕೆಂದರೆ ಹಣ ದೋಚಲು ಏಕಾಏಕಿ ಯಾರೂ ಬೇಕಾದರೂ ಮಾರಣಾಂತಿಕ ಹಲ್ಲೆ ಮಾಡಬಹುದು. ಬೆಂಗಳೂರಿನ ಎಟಿಎಂವೊಂದರಲ್ಲಿ ನಡೆದ ಹಲ್ಲೆಯನ್ನೂ ಮೀರಿಸುವಂತಹ ದಾಳಿ ಈ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ.

ಹೌದು, ಹರಿಯಾಣದ ಬಿವಾನಿ ನಗರದ ಸರ್ಕಾರಿ ಕಾಲೇಜು ಸಮೀಪವಿರುವ ಎಸ್‌ಬಿಐ ಬ್ಯಾಂಕ್‌ ಶಾಖೆಯೊಂದಕ್ಕೆ ಮಚ್ಚು ಹಿಡಿದು ಬಂದ ಮುಸುಕುಧಾರಿಯೊಬ್ಬ ಏಕಾಏಕಿ ಬ್ಯಾಂಕ್‌ ಕ್ಯಾಷಿಯರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಕೈಮುಗಿದು ಬೇಡಿಕೊಂಡರೂ ಮೂರ್ನಾಲ್ಕು ಬಾರಿ ಮಚ್ಚು ಬೀಸಿದ್ದಾನೆ. ಪಕ್ಕದಲ್ಲಿದ್ದವರೂ ತಿರುಗಿ ನೋಡುವಷ್ಟರಲ್ಲಿಯೇ ಓರ್ವ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಎಲ್ಲರನ್ನು ಬೆದರಿಸಿದ್ದಾನೆ.

ಹಣ ದೋಚಲು ಬಂದ ವ್ಯಕ್ತಿ ಸಿಬ್ಬಂದಿ ಮೇಲೆ 6 ಬಾರಿ ಮಚ್ಚಿನಿಂದ ಕೊಚ್ಚಿದ್ದಾನೆ. ನಂತರ ಮತ್ತೊಬ್ಬ ಸಿಬ್ಬಂದಿ ಬಳಿ ಹಣ ಕೇಳಿದ್ದಾನೆ. ಅವರು ಹಣ ಕೊಟ್ಟ ಬಳಿಕ ಒಂದು ಲಕ್ಷ ಹಣ ಪಡೆದು ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಈ ಎಲ್ಲ ದೃಶ್ಯಾವಳಿಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡಿದವರ ಎದೆ ನಡುಗಿಸುವಂತಿದೆ.

ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್)