VIDEO| ಸಿನಿಮೀಯ ಶೈಲಿಯಲ್ಲಿ ವಜ್ರಗಳನ್ನು ದೋಚಿದ ಖದೀಮರು; ಮೂರು ಗಂಟೆ ಚೇಸ್​ ಮಾಡಿ ಸೆರೆಹಿಡಿದ ಪೊಲೀಸರು

ಅಹಮದಬಾದ್​: ವಜ್ರ ತುಂಬಿದ ಬ್ಯಾಗ್​ಗಳನ್ನು ಕಳ್ಳರ ಗುಂಪೊಂದು ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿರುವ ಘಟನೆ ಗುಜರಾತಿನ ಸೂರತ್​ ನಗರದಲ್ಲಿ ನಡೆದಿದೆ. ದರೋಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಚೇಸಿಂಗ್​ನಲ್ಲಿ ಪೊಲೀಸರು ಆರೋಪಿಗಳನ್ನು ನೆರೆಯ ವಲ್ಸದ್​ ಜಿಲ್ಲೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೂರತ್​ ಡಿಸಿಪಿ ಭಕ್ತಿ ಥಾಕರ್​ ಅಂಗಡಿಯಾನ ಎಂಬ ಕೊರಿಯರ್​ ಸಂಸ್ಥೆಯ ಸಿಬ್ಬಂದಿ ವಜ್ರ ತುಂಬಿದ … Continue reading VIDEO| ಸಿನಿಮೀಯ ಶೈಲಿಯಲ್ಲಿ ವಜ್ರಗಳನ್ನು ದೋಚಿದ ಖದೀಮರು; ಮೂರು ಗಂಟೆ ಚೇಸ್​ ಮಾಡಿ ಸೆರೆಹಿಡಿದ ಪೊಲೀಸರು