ಗ್ರಾಮಗಳ ಅಭಿವೃದ್ಧಿಗೆ ರಸ್ತೆ ಅತ್ಯಗತ್ಯ

Roads are essential for village development

ಲೋಕಾಪುರ: ರಸ್ತೆಗಳು ಸುಧಾರಣೆ ಆದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

blank

ಸಮೀಪದ ಬದನೂರ ಗ್ರಾದಲ್ಲಿ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ರಾಹೆ-20 ರಿಂದ ಬದನೂರ-ಜುನ್ನೂರ ಜಿಲ್ಲಾ ಮುಖ್ಯ ರಸ್ತೆಯವರೆಗೆ 4 ಕಿ.ಮೀ ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆಗಳು ಉತ್ತಮವಾಗಿದ್ದರೆ ಮಾತ್ರ ರೈತರು ಹಾಗೂ ಸಾರ್ವಜನಿಕರು ವ್ಯವಹಾರ ಮತ್ತು ವಹಿವಾಟು ನಡೆಸಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ಭಾಗದ ಜನರಿಗೆ ಅನೂಕೂಲವಾಗಲೆಂದು ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿಯು ಗುಣಮಟ್ಟದಿಂದ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ತಿಳಿಸಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆಎಂಎ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಸಂಜಯ ತಳೇವಾಡ, ವೆಂಕಣ್ಣ ಅಂಕಲಗಿ, ಲಕ್ಷ್ಮಣ ಸೊನ್ನದ, ಗಿರಿಯಪ್ಪ ಹುಡೇದ, ಹಣಮಂತ ಅಮ್ಮಲಝರಿ, ಸುಭಾಸ ಚಿತ್ತರಗಿ, ಲಕ್ಷ್ಮಣ ನಾಯಕ, ಮಾನಿಂಗಪ್ಪ ಹುಂಡೇಕಾರ, ಇಒ ಉಮೇಶ ಸಿದ್ನಾಳ, ಚನ್ನಬಸವ ಮಾಚಕನೂರ, ಅಶೋಕ ಕ್ಯಾದಿಗೇರಿ ಗ್ರಾಪಂ ಕಾರ್ಯದರ್ಶಿ ಬಸವರಾಜ ಪೂಜಾರಿ ಮತ್ತಿತರರಿದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank