ಹುಬ್ಬಳ್ಳಿ: ನಗರದಲ್ಲಿ ರಸ್ತೆ ಹಾಗೂ ಸರ್ಕಾರಿ ಸ್ವತ್ತುಗಳ ಸಂಪೂರ್ಣ ಸಮೀಕ್ಷೆ ಮಾಡಿ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.
ಇಲ್ಲಿಯ ನ್ಯೂ ಇಂಗ್ಲಿಷ ಸ್ಕೂಲ್ ನಿಂದ ಹಳೇಹುಬ್ಬಳ್ಳಿ ಇಂಡಿಪಂಪ್ ಸರ್ಕಲ್ ವರೆಗಿನ ಮುಖ್ಯ ರಸ್ತೆ ಅಗಲೀಕರಣ ಸಂಬಂಧ ಶನಿವಾರ ಜಿಲ್ಲಾಧಿಕಾರಿ ಅವರೊಂದಿಗೆ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು.
ಸಾರ್ವಜನಿಕ ರಸ್ತೆ, ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಭೂ ದಾಖಲೆ, ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಸಮರೋಪಾದಿಯಲ್ಲಿ ಇತ್ಯರ್ಥ ಪಡಿಸಬೇಕು. ನಂತರ ರಸ್ತೆ ಅಭಿವದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೇ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.
ಹಳೇಹುಬ್ಬಳ್ಳಿ ರಸ್ತೆ ಕಿರಿದಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿವೆ. ಬಸ್ಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಗಲೀಕರಣ ಅವಶ್ಯವಿದ್ದು, ಅಧಿಕಾರಿಗಳು ಅವಶ್ಯವಿರುವ ಭೂಮಿ ಸ್ವಾಧಿನ ಪ್ರಕ್ರಿಯೆ ಕೂಡ ಆರಂಭಿಸಬೇಕೆಂದು ಸಲಹೆ ನೀಡಿದರು.
ತೆರವಿಗೆ ಸೂಚನೆ: ಕಂದಾಯ ಮತ್ತು ಮಹಾನಗರ ಪಾಲಿಕೆ ಆಸ್ತಿಗಳನ್ನು ಅನೇಕರು ಕಬ್ಜಾ ಮಾಡಿಕೊಂಡಿರುವ ಬಗ್ಗೆ ದೂರುಗಳಿವೆ. ತಹಸೀಲ್ದಾರ್ ಮತ್ತು ಪಾಲಿಕೆ ಆಯುಕ್ತರು ಜಂಟಿ ಸಮೀೆ ಕೈಗೊಂಡು ಸಮಗ್ರ ವರದಿ ಸಿದ್ಧಪಡಿಸಿಬೇಕು. ನಿಗದಿತ ಉದ್ದೇಶಕ್ಕೆ ಪಡೆದ ಸರ್ಕಾರಿ ಆಸ್ತಿಗಳನ್ನು ಅದೇ ಉದ್ದೇಶಕ್ಕೆ ಬಳಸಬೇಕು. ಒಂದು ವೇಳೆ ಪಾಳು ಬಿಟ್ಟಿದ್ದರೆ ಅಂಥ ಆಸ್ತಿಗಳನ್ನು ಮರಳಿ ಸ್ವಾಧಿನ ಪಡೆಯಬೇಕೆಂದು ಶಾಸಕರು ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಹಳೇಹುಬ್ಬಳ್ಳಿ ಮುಖ್ಯರಸ್ತೆ ಒತ್ತುವರಿ ತೆರವು, ಸರ್ಕಾರಿ ಸ್ವತ್ತುಗಳ ಕುರಿತು ಸಮೀೆ ಕೈಗೊಳ್ಳಲಾಗುವುದು. ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಬ್ರಿಡ್ಜ್ ನಿರ್ಮಾಣ: ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯ ಹಳೇ ಬ್ರಿಡ್ಜ್ ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಅಂದಾಜು 12ಕೋಟಿ ರೂ. ಕ್ರಿಯಾಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶ್ರೀ ಅನುಮೋದನೆ ದೊರೆಯಲಿದೆ ಎಂದು ಶಾಸಕ ಅಬ್ಬಯ್ಯ ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಕಲಗೌಡ ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ್, ಕಂದಾಯ ನಿರೀಕ ರವಿ ಬೆನ್ನೂರ, ಕಾಂಗ್ರೆಸ್ ಮುಖಂಡರಾದ ಅಲ್ತಾ್ ಕಿತ್ತೂರ, ಬಶೀರ್ ಗುಡಮಾಲ್, ಮುನ್ನಾ ಮಾರ್ಕರ್, ಇರ್ಷಾದ್ ನದಾ್ ಉಪಸ್ಥಿತರಿದ್ದರು.