ಐನಾಪುರ-ಉಗಾರ ರಸ್ತೆಗೆ 5 ಕೋಟಿ ಮಂಜೂರು

ಐನಾಪುರ: ಬಹುದಿನಗಳ ಬೇಡಿಕೆಯಾಗಿ ಉಳಿದಿರುವ ಐನಾಪುರ-ಉಗಾರ ರಸ್ತೆಗೆ 5 ಕೋಟಿ ರೂ.ಅನುದಾನ ಮಂಜೂರುಗೊಳಿಸಲಾಗಿದ್ದು, ಬರುವ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದ್ದಾರೆ.

ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಬಳಿ ಸೋಮವಾರ 5 ಕೋಟಿ ರೂ.ವೆಚ್ಚದ ಐನಾಪುರ-ಉಗಾರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಹಲವಾರು ರಸ್ತೆಗಳು ಕೆಟ್ಟಿದ್ದು, ಅವುಗಳನ್ನು ಅಭಿವೃದ್ಧಿ ಪಡಿಸಲು 15 ಕೋಟಿ ರೂ.ವಿಶೇಷ ಅನುದಾನವನ್ನು ಮುಖ್ಯಮಂತ್ರಿ ವತಿಯಿಂದ ಬಿಡುಗಡೆ ಗೊಳಿಸಿದ್ದೇನೆ. ಬರುವ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು.

ಗುತ್ತಿಗೆದಾರರು ಕೆಲಸ ಮಾಡುವಾಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಶೀಲಿಸುವ ಮೂಲಕ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಂ.ಎಸ್.ವಡಿಯರ, ಸಹಾಯಕ ಅಭಿಯಂತ ಆರ್.ಪಿ.ಅವತಾಡೆ, ಎಂ.ಎಸ್.ಮಗದುಮ್ಮ, ಗುತ್ತಿಗೆದಾರ ನಾನಾಸಾಹೇಬ ಅವತಾಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮನಿಷಾ ಹರಳೆ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ರಾಜೇಂದ್ರ ಪೋತದಾರ, ಸುನೀಲ ಪಾಟೀಲ, ಬಾಳಾಸಾಬ ದಾನೊಳ್ಳಿ, ಅಪ್ಪಾಸಾಬ ಚೌಗುಲಾ, ಬಾಬಾಸಾಬ ದಾನೊಳ್ಳಿ, ಸತೀಶ ಗಾಣಿಗೇರ, ನಾನಾಸಾಬ ಅವತಾಡೆ, ಸುರೇಶ ಗಾಣಿಗೇರ, ಹನುಮಂತ ಗುರವ, ದಾದಾ ಪಾಟೀಲ, ಯಶವಂತ ಪಾಟೀಲ, ಪ್ರಕಾಶ ಚಿನಗಿ ಇತರರು ಇದ್ದರು.