ಮಳೆಗಾಲದಲ್ಲಿ ಒಂದೆರಡುದಿನ ಬಂದು ಹಂಚಿನಕೂಡಿಗೆಯಲ್ಲಿ ವಾಸ್ತವ್ಯ ಮಾಡಿ

ಶೃಂಗೇರಿ: ಜನನಾಯಕರು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಾಗೂ ಕಿರುಸೇತುವೆ ಅಭಿವೃದ್ಧಿ ಮಾಡಿದ್ದೇವೆ ಎಂದು ವೇದಿಕೆಯಲ್ಲಿ ಹೊಗಳಿಕೊಳ್ಳುತ್ತಾರೆ. ಅವರು ಇಲ್ಲಿ ಬಂದು ಎರಡು ದಿನ ವಾಸ್ತವ್ಯ ಹೂಡಲಿ. ಆಗ ಅವರಿಗೆ ನಮ್ಮ ಪರಿಸ್ಥಿತಿ ಅರ್ಥವಾಗಬಹುದು.

ಹೀಗೆ ಆಕ್ರೋಶದಿಂದ ಹೇಳಿದವರು ನೆಮ್ಮಾರ್ ಗ್ರಾಪಂ ವ್ಯಾಪ್ತಿಯ ಹಂಚಿನಕೂಡಿಗೆ ಗ್ರಾಮಸ್ಥರು. ಸರ್ಕಾರಗಳು ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು ಎಂಬುದಕ್ಕೆ ಜಲ್ವಂತ ಉದಾಹರಣೆ ಈ ಊರಿನ ದುಸ್ಥಿತಿ.

ಶೃಂಗೇರಿಯಿಂದ ಸುಮಾರು 25 ಕಿಮೀ ದೂರದಲ್ಲಿರುವ ನೆಮ್ಮಾರು ಗ್ರಾಪಂ ವ್ಯಾಪ್ತಿಯ ಹಂಚಿನಕೂಡಿಗೆಗೆ ತೆರಳಬೇಕಾದರೆ ಬುಕುಡಿಬೈಲಿನ ಮಣ್ಣಿನ ಕಚ್ಛಾ ರಸ್ತೆಯಲ್ಲಿ ಆರು ಕಿಮೀ ದೂರ ವಾಹನಗಳಲ್ಲಿ ಹರಸಾಹಸ ಪಡಬೇಕು. ನೆಮ್ಮಾರ್ ಗ್ರಾಪಂ ವಾ ್ಯ್ತು ಮಲ್ನಾಡು ಗ್ರಾಮದ ಹಂಚಿನಕೂಡಿಗೆಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಹೆಚ್ಚಾಗಿ ವಾಸವಾಗಿರುವವರು ಪರಿಶಿಷ್ಟ ಜನಾಂಗದವರು. ಸುಮಾರು 300 ಜನರು ಇರುವ ಗ್ರಾಮದಲ್ಲಿ ಪಟ್ಟಣಕ್ಕೆ ಬರಲು ಸಂಪರ್ಕ ಸೇತುವೆ ಮಕ್ಕಿಹಾಳೆ ಕಿರು ಸೇತುವೆ. ಈ ಕಿರು ಸೇತುವೆ 50 ವರ್ಷಗಳ ಹಿಂದೆ ನಿರ್ವಿುಸಿದ್ದು. 2018ರ ಅತಿವೃಷ್ಟಿಯಲ್ಲಿ ಸೇತುವೆ ಕುಸಿಯಿತು ಎಂದು ಗ್ರಾಪಂ ಸದಸ್ಯ ಪ್ರಶಾಂತ್ ಡಿ.ಎಸ್. ಮಾಹಿತಿ ನೀಡಿದ್ದಾರೆ.

ಮಳೆಗಾಲದಲ್ಲಿ ಪರದಾಡುವ ಗ್ರಾಮಸ್ಥರು: 2018ರಲ್ಲಿ ಸೇತುವೆ ಕುಸಿದ ನಂತರ ಗ್ರಾಮಸ್ಥರು ಪರದಾಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಮನೆಗೆ ಅಗತ್ಯ ಸಾಮಗ್ರಿ ತರಲು ಇದೇ ಸೇತುವೆ ದಾಟಿ ಹೋಗಬೇಕು. ತಿಂಗಳಿಗೊಮ್ಮೆ ಸರ್ಕಾರ ನೀಡುವ ಪಡಿತರ ತರಲು ನೆಮ್ಮಾರು ಸೊಸೈಟಿಗೆ ಬರಬೇಕು. ಗ್ರಾಮದಲ್ಲಿರುವ ನವಿರೇಹಕ್ಲು, ಪಾರ್ಥನಮಕ್ಕಿ, ಬಸವನಕಲ್ಲು, ಹಸಿರುಹಡ್ಲು, ದೊಡ್ಡಹಡ್ಲು, ಮಿನಗರಡಿ, ಹಂಚಿನಕೂಡಿಗೆ, ದೊಡ್ಡಳ್ಳದಲ್ಲಿ ವಾಸವಿರುವ ಗ್ರಾಮಸ್ಥರು ಮಳೆಗಾಲದಲ್ಲಿ ಸುಮಾರು 25 ಕಿಮೀ ದೂರದಲ್ಲಿರುವ ಮೇಗೂರಿಗೆ ಕಿತ್ಲೇಗೋಳಿ ಮಾರ್ಗವಾಗಿ ಸಾಗಬೇಕು. ಮಳೆಗಾಲದಲ್ಲಿ ಈ ಸೇತುವೆ ದಾಟುವುದು ದುಸ್ಸಾಹಸವಾದ್ದರಿಂದ ಹಲವರು ತಮ್ಮ ಮಕ್ಕಳನ್ನು ಹಾಸ್ಟೆಲ್​ಗಳಿಗೆ ಸೇರಿಸಿದ್ದಾರೆ. ಇನ್ನೂ ಕೆಲವರು ಪಿಕ್​ಪ್ ವಾಹನಗಳ ಮೂಲಕ 20 ಕಿಮೀ ದೂರದಲ್ಲಿರುವ ಜಯಪುರ ಶಾಲಾ-ಕಾಲೇಜುಗಳಿಗೆ ಕಳುಹಿಸುತ್ತಾರೆ.

ಗ್ರಾಮಸ್ಥರು ನಿರ್ವಿುಸಿದ ಸೇತುವೆ: ಮಳೆಗಾಲದಲ್ಲಿ ಕುಸಿದ ಸೇತುವೆಯನ್ನು ಗ್ರಾಮಸ್ಥರು ಜೆಸಿಬಿ ಮೂಲಕ ಕಲ್ಲು, ಮಣ್ಣಿನಿಂದ ತಾತ್ಕಾಲಿಕವಾಗಿ ನಿರ್ವಿುಸಿಕೊಂಡಿದ್ದಾರೆ.ಪ್ರಾಕೃತಿಕ ವಿಕೋಪದಿಂದ ಬಂದ ಅನುದಾನ 18 ಲಕ್ಷ ರೂ. ವನ್ನು ಸೇತುವೆ ನಿರ್ವಿುಸಲು ಉಪಯೋಗಿಸಬಹುದಿತ್ತು. ಆದರೆ ಅದನ್ನು ವೈಯಕ್ತಿಕವಾಗಿ ಇಬ್ಬರ ಮನೆಗೆ ಹೋಗುವ ರಸ್ತೆಗೆ ಬಳಕೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ. ಗ್ರಾಮಸ್ಥರಿಗೆ ತುರ್ತಾಗಿ ಬೇಕಾಗಿರುವ ಕಿರುಸೇತುವೆಯನ್ನು ಸರ್ಕಾರ ಕೂಡಲೇ ನಿರ್ವಿುಸಬೇಕು

Leave a Reply

Your email address will not be published. Required fields are marked *