ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆ, ತಡೆಗೋಡೆ

ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವಾರ್ಡ್ ನಂ. 1ರಲ್ಲಿ ಬುಧವಾರ ರಾತ್ರಿ ಸುರಿದ ವಿಪರೀತ ಮಳೆಗೆ ಶರಾವತಿ ನದಿಯ ಪ್ರವಾಹದಿಂದಾಗಿ ಸೇತುವೆಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಕೊಚ್ಚಿ ಹೋಗಿದೆ.

ಬೇರಾಳ-ಮಣಕನಮಠ-ಜಲಗಾರು ಸಂಪರ್ಕಕ್ಕಾಗಿ ನಿರ್ವಿುಸಲಾಗಿದ್ದ ತಡೆಗೋಡೆ ಹಾಗೂ ಸೇತುವೆ ನಿರ್ವಣಕ್ಕೆ ಜಿಲ್ಲಾ ಪಂಚಾಯಿತಿಯಿಂದ 3 ಲಕ್ಷ ರೂ., ಉದ್ಯೋಗ ಖಾತ್ರಿಯಿಂದ 6.70 ಲಕ್ಷ ಹಾಗೂ ಸ್ಥಳೀಯವಾಗಿ ಜನರು 2.50 ಲಕ್ಷ ರೂ. ವಿನಿಯೋಗಿಸಿದ್ದರು.

1.50 ಕಿಮೀ ಉದ್ದದ ರಸ್ತೆ ಹಾಗೂ ಸೇತುವೆಗೆ ತಡೆಗೋಡೆ ನಿರ್ವಿುಸಿದ್ದು, ಪ್ರವಾಹದಿಂದ ಕೊಚ್ಚಿಹೋಗಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ರಸ್ತೆ ಹಾಗೂ ಸೇತುವೆಗೆ ಕಟ್ಟಿದ್ದ ತಡೆಗೋಡೆ ಕೊಚ್ಚಿ ಹೋಗಿದ್ದರಿಂದ ಬೇರಾಳ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಜನರು ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ. ಕೊಚ್ಚಿ ಹೋದ ರಸ್ತೆಯನ್ನು ಶೀಘ್ರ ರಿಪೇರಿ ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *