ಸೈಡ್​ ಕೊಡುವ ವಿಚಾರಕ್ಕೆ ಅಡ್ಡ ಹಾಕಿ ಹಲ್ಲೆ ಮಾಡಿದ ರಿಕ್ಷಾ ಚಾಲಕ!

ಬೆಂಗಳೂರು: ಈ ಆಟೋ ರಿಕ್ಷಾ ಚಾಲಕ ಕಾರಿನ ಡ್ರೈವರ್​ ಸೈಡ್​ ಕೊಡಲಿಲ್ಲ ಎಂದು ಸಿಗ್ನಲ್​ ಬಳಿ ನಡುರಸ್ತೆಯಲ್ಲೇ ನಿಲ್ಲಿಸಿ ಹಲ್ಲೆ ಮಾಡಿದ್ದಾನೆ! ಇವರಿಬ್ಬರ ನಡುವೆ ಓವರ್​ ಟೇಕ್​ ಮಾಡುವಾಗ ಜಟಾಪಟಿ ನಡೆದಿದೆ. ದಾರಿ ಬಿಡದಕ್ಕೆ ಇಬ್ಬರ ನಡುವೆ ಕಿರಿಕ್​ ಆಗಿದ್ದು ಈ ಆಟೋ ಚಾಲಕ ತನ್ನ ರಿಕ್ಷಾವನ್ನು ಕಾರಿಗೆ ಅಡ್ಡ ಹಾಕಿ ಹಲ್ಲೆ ಮಾಡಿದ್ದಾನೆ. ಆಟೋ ಚಾಲಕನ ಕೃತ್ಯ ಮತ್ತೊಂದು ಕಾರಿನ ಡ್ಯಾಶ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿ ನಡೆದಿದೆ.