ಕಾರವಾರ: ನಗರದ ಹುಬ್ಬುವಾಡ ರಸ್ತೆಯ ಅವ್ಯವಸ್ಥೆ (Road problem) ಖಂಡಿಸಿ, ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಆಟೋ ರಿಕ್ಷಾ ಚಾಲಕರು ಸೋಮವಾರ ಸಾಯಂಕಾಲ ಹಠಾತ್ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ನಗರದ ದ್ವಾರಕಾ ಹೋಟೆಲ್ ಎದುರು ಬಿದ್ದ ಹೊಂಡದಲ್ಲಿಯೇ ಕುಳಿತ ಆಟೋ ರಿಕ್ಷಾ ಚಾಲಕರು ಸುಮಾರು 20 ನಿಮಿಷ ವಾಹನಗಳನ್ನು ತಡೆದರು. ಘೋಷಣೆಗಳನ್ನು ಕೂಗಿದರು. ಬಸ್, ಬೈಕ್ ಸೇರಿ ಎರಡೂ ಕಡೆ ನೂರಾರು ವಾಹನಗಳು ನಿಂತು ಓಡಾಡಲು ಸಮಸ್ಯೆಯಾಯಿತು. ಸಿಪಿಐ ರಮೇಶ ಹೂಗಾರ ಅವರು ಸ್ಥಳಕ್ಕೆ ಆಗಮಿಸಿ ಮಂಗಳವಾರ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಮಾತುಕತೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ನಗರದ ಹಬ್ಬುವಾಡ ರಸ್ತೆಯು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ದಿನದ 24 ಗಂಟೆಯೂ ವಾಹನಗಳ ಓಡಾಟ ಇರುತ್ತದೆ. ಕಾರವಾರ-ಔರಾದ್ ರಾಜ್ಯ ಹೆದ್ದಾರಿ ಇದಾಗಿದ್ದು, ನಗರದ ವಿವಿಧೆಡೆ ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದಿವೆ. ಅವುಗಳನ್ನು ಸರಿಪಡಿಸುವಂತೆ ವಿವಿಧ ಸಂಘಟನೆಗಳು ಸಾಕಷ್ಟು ಮನವಿ ಕೊಟ್ಟಿವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಒಂದೆರಡು ಬಾರಿ ಮಣ್ಣು ತುಂಬಿ ಬಿಡಲಾಗಿದೆ.
ಭಾರಿ ಹೊಂಡಗಳಿಂದ ಅಪಘಾತಗಳಾಗುತ್ತಿವೆ. ವಾಹನಗಳ ಬಿಡಿಭಾಗಗಳು ಹಾಳಾಗುತ್ತಿವೆ. ಆಟೋ ರಿಕ್ಷಾ ಚಾಲಕರು ದಿನಕ್ಕೆ ಹತ್ತಾರು ಬಾರಿ ಓಡಾಡಬೇಕಿದ್ದು, ಓಡಾಟ ದುಸ್ತರವಾಗಿದೆ. ಈ ಕುರಿತು ಕ್ರಮ ವಹಿಸಬೇಕು ಎಂದು ಚಾಲಕರು ಒತ್ತಾಯಿಸಿದರು. ರಾಘು ನಾಯ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Road problem
ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿhttps://www.vijayavani.net/lorry-overturns-at-arabile-ghat