More

    ರಸ್ತೆಯೋ, ಕೆಸರು ಗದ್ದೆಯೋ..?

    ತ್ಯಾಗರ್ತಿ: ಸಾರ್ವಜನಿಕರಿಗೆ ಅನುಕೂಲವಾಗಲು ಮಾಡಿದ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದ್ದು ಮಳೆಯಿಂದಾಗಿ ಅಂಟು ಮಣ್ಣಿನ ರಸ್ತೆ ಕೆಸರು ಗದ್ದೆಯಂತಾಗಿದೆ. ಸಾರ್ವಜನಿಕರು ಸರ್ಕಾರ ಹಾಗೂ ಜನಪ್ರತಿನಿಽಗಳಿಗೆ ಹಿಡಿ ಶಾಪ ಹಾಕುತ್ತ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈಗ ತಾತ್ಕಾಲಿಕ ಪರಿಹಾರವಾಗಿ ಜೇಡಿ ಮಣ್ಣು ತೆಗೆದು ಬೇರೆ ಜೆಲ್ಲಿ ಪುಡಿ ಹಾಕಿ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಾಗರ ತಾಲೂಕಿನ ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮತ್ತಿ ಹಾಗೂ ತೆಂಗಿನ ಮಠ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಎರಡು ದಿನಗಳಿಂದ ಇಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು ಜನರಿಗೆ ಇನ್ನಷ್ಟು ಗೋಳು ಎದುರಾಗಿದೆ.
    ಕಳೆದ ವರ್ಷ ಸರ್ಕಾರದಿಂದ ೩೦ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ರಸ್ತೆಗೆ ಹಣ ಮಂಜೂರಾಗಿದ್ದರೂ ಅಽಕಾರಿಗಳು ಸಕಾಲದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕೆಲಸ ಪ್ರಾರಂಭಿಸದೇ ನಿರ್ಲಕ್ಷ÷್ಯ ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಕಾಮಗಾರಿ ಹೆಸರಿನಲ್ಲಿ ಮತದಾರರ ಓಲೈಕೆಗಾಗಿ ತರಾತುರಿಯಲ್ಲಿ ಕೆಲಸ ಪ್ರಾರಂಭಿಸಲಾಗಿದೆ. ಏಪ್ರಿಲ್‌ನಲ್ಲಿ ರಸ್ತೆಗೆ ಜೆಲ್ಲಿ ಸುರಿದು ಒಂದು ತಿಂಗಳು ರೋಲರ್ ಕೂಡ ಹೊಡೆಯದೆ ಹಾಗೆ ಬಿಟ್ಟು ದ್ವಿಚಕ್ರ ವಾಹನ ಹಾಗೂ ಕಾಲ್ನಡಿಗೆಯಲ್ಲಿ ಓಡಾಡಲೂ ತೊಂದರೆ ಆಗಿತ್ತು. ಈಗ ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಜೇಡಿಮಣ್ಣು ಹಾಕಿ ರಸ್ತೆ ಮಾಡಿದ್ದು ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗಿದೆ. ಹದಿನೈದು ದಿನಗಳಲ್ಲಿ ಮಾಡಬಹುದಾದ ಕೆಲಸ ಈ ರೀತಿ ನಿರ್ಲಕ್ಷ÷್ಯ ಧೋರಣೆಯಿಂದ ವಿಳಂಬ ನೀತಿ ಅನುಸರಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಬೊಮ್ಮತ್ತಿ- ತೆಂಗಿನಮಠ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇದುವರೆಗೂ ಗುತ್ತಿಗೆದಾರರಿಗೆ ಯಾವುದೇ ಹಣ ನೀಡಿಲ್ಲ. ಮಳೆಗಾಲ ಮುಗಿದ ನಂತರ ಡಿಸೆಂಬರ್‌ನಲ್ಲಿ ಡಾಂಬರೀಕರಣ ಮಾಡಲಾಗುವುದು. ಈಗ ಮಳೆ ಬಂದು ಸ್ವಲ್ಪ ತೊಂದರೆಯಾಗಿದೆ. ಸಾರ್ವಜನಿಕರು ಓಡಾಡಲು ತೊಂದರೆ ಆಗದಂತೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ.
    |ತಿಪ್ಪೇಸ್ವಾಮಿ
    ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts