18 C
Bangalore
Thursday, November 14, 2019

ಮಳೆಗಾಲದಲ್ಲಿ ತೋಡು, ಬೇಸಿಗೆಯಲ್ಲಿ ರೋಡು!

Latest News

ಟಿ20 ವಿಶ್ವಕಪ್ ಫೈನಲ್ ವೇಳೆ ಕ್ಯಾಟಿ ಪೆರ್ರಿ ಪಾಪ್ ಸಂಗೀತ!

ಸಿಡ್ನಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದ ನಡುವೆ ಮುಂದಿನ ವರ್ಷ ಮಾರ್ಚ್ 8ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್ ಫೈನಲ್...

ಹೆಚ್ಚಾಗುತ್ತಿದೆ ಸಿಹಿ ಸಂಕಟ: ಮಧುಮೇಹದ ತವರಾಗುತ್ತಿದೆ ಭಾರತ, ನಗರವಾಸಿಗಳಲ್ಲಿ ಅಧಿಕ

ಬೆಂಗಳೂರು: ಭಾರತ ಮಧುಮೇಹಿಗಳ ತವರಾಗಿ ಬದಲಾಗುತ್ತಿದೆ. ಮಕ್ಕಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರೋಗಕ್ಕೆ ತುತ್ತಾಗುತ್ತಿದ್ದು, ಹಸುಳೆಗಳಲ್ಲೂ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಬೆಂಗಳೂರಿನ ಇಂದಿರಾಗಾಂಧಿ...

ಕೊನೇ ಬಾಲಲ್ಲಿ ಸಿಕ್ಸರ್ ಸಂಭ್ರಮದಲ್ಲಿ ಸಿಎಂ: ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್​ ತೀರ್ಪು

ಬೆಂಗಳೂರು: ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದ್ದು, ಸಿಎಂ ಯಡಿಯೂರಪ್ಪ ಮ್ಯಾಚ್ ಗೆಲ್ಲಿಸಲು ಕೊನೆಯ ಬಾಲ್​ಗೆ ಸಿಕ್ಸ್ ಹೊಡೆದ ಸಂತಸದಲ್ಲಿ ಬೀಗಿದ್ದಾರೆ....

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ದಾಮಿನಿ ಆಯ್ಕೆ

ಧಾರವಾಡ: ನಗರದ ಜೆಎಸ್​ಎಸ್ ಆರ್.ಎಸ್. ಹುಕ್ಕೇರಿಕರ ಪಿಯು ಕಾಲೇಜಿನ ವಿದ್ಯಾರ್ಥಿನಿ ದಾಮಿನಿ ಉದಯ ಬನ್ನಿಕೊಪ್ಪ ನ. 30ರಂದು ಜಬಲಪುರದಲ್ಲಿ ನಡೆಯುವ ಸ್ಕೂಲ್ ಗೇಮ್್ಸ...

ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ ಬೆಸೆಯಲು ಬ್ರಿಕ್ಸ್ ವೇದಿಕೆ

ಬ್ರಾಸಿಲಾ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬ್ರೆಜಿಲ್​ಗೆ ತೆರಳಿದ್ದಾರೆ. ಸದಸ್ಯ ದೇಶಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ...

ಪ್ರವೀಣ್‌ರಾಜ್ ಕೊಲ ಕಡಬ
ಮಳೆಗಾಲದಲ್ಲಿ ತೋಡು… ಬೇಸಿಗೆಯಲ್ಲಿ ರೋಡು… ಇದು ಬೆಳಂದೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸವಣೂರು ಗ್ರಾಮ ಪಂಚಾಯಿತಿಗೊಳಪಟ್ಟ ಪಾಲ್ತಾಡಿ ಗ್ರಾಮದ ಪರಣೆಯಿಂದ ಬಂಬಿಲ ಬೈಲು ಪ್ರದೇಶಗಳಿಗೆ ಹೋಗುವ ಸಂಪರ್ಕ ರಸ್ತೆಯ ಸ್ಥಿತಿ.

ಪರಣೆಯಿಂದ ಮೀನಕೊಳೆಂಜಿ, ಜಾರಿಗೆತ್ತಡಿ, ಚಾಕೊಟೆತ್ತಡಿ ಸೇರಿದಂತೆ ಬಂಬಿಲಬೈಲು ಪ್ರದೇಶಗಳಿಗೆ ಹೋಗುವ ಜನರ ಹಲವು ದಶಕಗಳ ಸಮಸ್ಯೆ. ಈ ರಸ್ತೆಯ ಪರಣೆ ಸಮೀಪ ಸುಮಾರು 50 ಮೀಟರ್‌ನಷ್ಟು ರಸ್ತೆಗೆ ಅಡ್ಡವಾಗಿರುವ ತೋಡು ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತದೆ. ಈ ತೋಡು ದಾಟಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಚಿಕ್ಕ ಮಕ್ಕಳನ್ನು ಹೆತ್ತವರು ಭಯದಲ್ಲೇ ಕಳುಹಿಸಬೇಕಾದ ಸ್ಥಿತಿ ಇದೆ.

ಕಳೆದ ವರ್ಷ ಮಳೆಗಾಲದಲ್ಲಿ 20ಕ್ಕೂ ಹೆಚ್ಚು ಬಾರಿ ಈ ರಸ್ತೆ ಮುಳುಗಡೆಯಾಗಿತ್ತು. ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ, ಜಿಪಂ ಇಂಜಿನಿಯರ್ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಬಾರಿ ಮಳೆಗಾಲಕ್ಕೂ ಮುನ್ನ ಸಮಸ್ಯೆ ಬಗೆಹರಿಯುವ ವಿಶ್ವಾಸವಿತ್ತು. ಆದರೆ ಮಳೆಗಾಲ ಸಮೀಪಿಸುತ್ತಿದ್ದರೂ ಯಾವುದೇ ಬೆಳವಣಿಗೆಯಾಗಿಲ್ಲ.

ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತದೆ. ರಸ್ತೆಯ ತಳವೂ ಗೋಚರವಾಗುವುದಿಲ್ಲ. ಜತೆಗೆ ಕೆಸರೂ ತುಂಬಿರುತ್ತದೆ. ಬೇಸಿಗೆಯಲ್ಲಿ ನೀರಿನ ಹರಿವು ಇಲ್ಲದಿರುವುದರಿಂದ ಅಪಾಯಕಾರಿ ಸ್ಥಿತಿ ತಂದೊಡ್ಡಲಿದೆ. ಈ ಸ್ಥಳದಲ್ಲಿ ಕಿರು ಸೇತುವೆ ನಿರ್ಮಾಣ ಅಗತ್ಯ.
ವಸಂತ ಗೌಡ ಚಾಕೊಟೆತ್ತಡಿ

ಕೃಷಿಯುತ್ಪನ್ನ ಸಾಗಾಟಕ್ಕೆ ತೊಂದರೆ: ಈ ಭಾಗದಲ್ಲಿ ಹೆಚ್ಚು ಮಂದಿ ತರಕಾರಿ, ಅಡಕೆ, ತೆಂಗು ಕೃಷಿಕರಿದ್ದಾರೆ. ಕೃಷಿಕರು ಹೆಚ್ಚಾಗಿ ಇದೇ ರಸ್ತೆ ಬಳಸುತ್ತಿದ್ದು, ಮಳೆಗಾಲದಲ್ಲಿ ತಮ್ಮ ಕೃಷಿಯುತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಟ ಮಾಡಬೇಕಾದರೆ ಹರಸಾಹಸ ಪಡಬೇಕಾಗಿದೆ. ಇಲ್ಲಿ ಸರಿಯಾದ ಚರಂಡಿ ಹಾಗೂ ಮೋರಿ ನಿರ್ಮಾಣ ಕಾರ್ಯವೂ ಆಗಬೇಕಿದೆ. ಕಿರು ಸೇತುವೆ ನಿರ್ಮಾಣವಾದರೆ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಸಹಕಾರಿಯಾಗುತ್ತದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಮನೆ ತಲುಪಲು ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗುತ್ತದೆ.

ಸವಣೂರು- ಹೊಸಗದ್ದೆ ರಸ್ತೆಗೆ ಡಾಂಬರು

ಕಡಬ: ಬೆಳಂದೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಸವಣೂರು- ಕುಮಾರಮಂಗಲ-ಮಾಡಾವು ರಸ್ತೆ ಅಭಿವೃದ್ಧಿ ಕಾಮಗಾರಿ ಕೊನೆಗೂ ಆರಂಭವಾಗಿದೆ. ಈ ಮೂಲಕ ಜನರ ಬಹುವರ್ಷಗಳ ಬೇಡಿಕೆ ಈಡೇರಲಿದೆ.
ಹೊಂಡ-ಗುಂಡಿಗಳಿಂದ ಕೂಡಿದ ಈ ರಸ್ತೆ 15 ವರ್ಷಗಳಿಂದ ಡಾಂಬರು ಕಂಡಿರಲಿಲ್ಲ. ಈ ರಸ್ತೆ ತೀರ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆವಾಗಿತ್ತು. ಸುತ್ತಮುತ್ತಲಿನ ರಸ್ತೆಗಳು ವಿಸ್ತರಣೆಯಾಗಿ ಡಾಂಬರು ಅಳವಡಿಕೆಯಾಗಿದ್ದರೂ 7 ಕಿ.ಮೀ ಉದ್ದದ ಈ ರಸ್ತೆ ಮಾತ್ರ ಪ್ರಗತಿ ಕಂಡಿರಲಿಲ್ಲ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿತ್ತು.

ಸುಳ್ಯ ಶಾಸಕ ಎಸ್.ಅಂಗಾರ ಅವರ 23.4 ಲಕ್ಷ ರೂ.ಗಳ ಅನುದಾನದಿಂದ ಈ ರಸ್ತೆ ಡಾಂಬರು ಕಾಣುತ್ತಿದೆ. ಕೆಲ ಸಮಯಗಳ ಹಿಂದೆ ಶಾಸಕರ 10 ಲಕ್ಷ ರೂ. ಮಳೆಹಾನಿ ಅನುದಾನದಲ್ಲೂ ರಸ್ತೆ ದುರಸ್ತಿ ಮಾಡಲಾಗಿತ್ತು. ರಸ್ತೆ ಮೂಲಕ ಮಾಡಾವು ಪುತ್ತೂರು, ಬೆಳ್ಳಾರೆ, ಪೆರ್ಲಂಪಾಡಿ, ಆಮ್ಚಿನಡ್ಕ, ಮುಳ್ಳೇರಿಯ ಸಂಪರ್ಕಿಸಬಹುದು. ರಸ್ತೆ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಆಗ್ರಹಿಸುತತಿದ್ದರೂ ಇಲ್ಲಿ ತನಕ ಸ್ಪಂದನೆ ದೊರೆತಿರಲಿಲ್ಲ.
ಹಲವು ವರ್ಷಗಳಿಂದ ರಸ್ತೆ ದುರಸ್ತಿ ಕುರಿತ ಮನವಿಗೆ ಸ್ಪ್ಪಂದನೆ ಸಿಗದ ಕಾರಣ 2018ರ ಆ.21ರಂದು ಊರವರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ರಸ್ತೆ ದುರಸ್ತಿ ಪಡಿಸುವ ಭರವಸೆ ಜನಪ್ರತಿನಿಧಿಗಳಿಂದ ಲಭಿಸಿತ್ತು.

ಈ ರಸ್ತೆ ಅಭಿವೃದ್ಧಿ ನಮ್ಮ ಗ್ರಾಮದ ಬಹುಕಾಲದ ಬೇಡಿಕೆ. ಕಳೆದ ಒಂದೂವರೆ ದಶಕಗಳಿಂದ ರಸ್ತೆ ಅಭಿವೃದ್ಧ್ದಿಗಾಗಿ ಜಿಪಂ ಸದಸ್ಯರು, ಶಾಸಕರು, ಸಂಸದರಿಗೆ ಮನವಿ ಮಾಡಲಾಗಿತ್ತು. ರಸ್ತೆ ತೀರ ಹದಗೆಟ್ಟಿದ್ದಾಗ ಊರವರೇ ಸೇರಿ ಶ್ರಮದಾನ ಮೂಲಕ ದುರಸ್ತಿಪಡಿಸಿದ್ದರು. ಒಂದು ಬಾರಿ ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ ಕೂಡ ನಡೆಸಿದ್ದೆವು. ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆಗಳಿಗೂ ಕಳುಹಿಸಿಕೊಡಲಾಗಿತ್ತು.
ಗಿರಿಶಂಕರ ಸುಲಾಯ ಸವಣೂರು ಗ್ರಾಪಂ ಸದಸ್ಯ 

- Advertisement -

Stay connected

278,452FansLike
559FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...