ಮಾನ್ವಿ: ಪಟ್ಟಣದ 15ನೇ ವಾರ್ಡ್‌ನ ಬೇರಬನ್ ಮಸೀದಿ ಮರಕಸ್ ಮುಂಭಾಗದ ರಸ್ತೆ ಒತ್ತುವಾರಿಯಾಗಿದ್ದು, ಪುರಸಭೆ ಅಧಿಕಾರಿಗಳು ರಸ್ತೆ ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಒತ್ತುವರಿ ತೆರವುಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು.
ಇದನ್ನು ಓದಿ: ಸರ್ಕಾರಿ ಜಾಗ ಒತ್ತುವರಿ ತೆರವು
ಪುರಸಭೆ ವ್ಯವಸ್ಥಾಪಕ ಕೆ.ನರಸಿಂಹಗೆ ಮನವಿ ಸಲ್ಲಿಸಿ, ಅಧಿಕಾರಿಗಳು ಒತ್ತುವರಿಯನ್ನು ತೆರವು ಮಾಡಬೇಕು. ಇದರಿಂದ ಬೇರಬನ್ ಮಸೀದಿ ರಸ್ತೆಯಲ್ಲಿ ಓಡಾಟಕ್ಕೆ ಅನುಕೂಲವಾಗಲಿದೆ. ರಸ್ತೆ ಇಕ್ಕಟ್ಟಾಗಿದ್ದರಿಂದ ವಾಹನ ಸಂಚಾರಕ್ಕೆ ಅಡೆ-ತಡೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದರು.
ವಾರ್ಡ್‌ನ ನಿವಾಸಿಗಳಾದ ಬಿ.ಫಯಾಜ್ ಹುಸೇನ್, ಬಿ.ಇಸಾಕ್, ಜಾಲಾಲ್ ಮೆಕ್ಯಾನಿಕ್, ಶೇಖ್ ನವಾಜ್, ಬಿ.ಜಾಕೀರ್ ಹುಸೇನ್, ಎಂ.ಡಿ.ಅಲಂಬಾಷಾ, ಮುಖಮ್ಮಿಲ್, ಆಲ್ತಾಫ್ ಹುಸೇನ್, ರಹೀಮ್ ಆಟೋ, ಸಾದಿಕ್ ಹುಸೇನ್.ಬಿ.ಶೇಖ ಮುಕ್ತಿಯಾರ್, ಮಹ್ಮದ್ ಉಮೇರ್, ರೇವಣ್ಣ ಸಿದ್ದಯ್ಯ ಇನ್ನಿತರರು ಇದ್ದರು.