ಮಸ್ಕಿ: ಎರಡು ದಿನಗಳಿಂದ ತಾಲೂಕಿನಾದ್ಯಂತ ಸುರಿದ ಮಳೆಗೆ ವೆಂಕಟಾಪುರ ರಸ್ತೆ ಕುಸಿದು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆಯ ಪಕ್ಕದಲ್ಲಿ ಅನೇಕ ಬಾಡಾವಣೆಗಳು ನಿರ್ಮಾಣವಾಗುತ್ತಿದ್ದು, ಅಲ್ಲಿನ ನೀರು ರಸ್ತೆ ಬದಿಯ ಚರಂಡಿ ಮೂಲಕ ಹರಿದು ಹೋಗಿ ರಸ್ತೆಯ ಪಕ್ಕದಲ್ಲಿ ಕೊರಕಲು ಉಂಟಾಗಿ ರಸ್ತೆ ಕುಸಿದಿದೆ. ಹಾಲಾಪುರ ಗ್ರಾಪಂ ವ್ಯಾಪ್ತಿಯ ಜಿನ್ನಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿದ್ದು, ಧಾನ್ಯಗಳು, ಆಟದ ಸಾಮಗ್ರಿಗಳು ಹಾಳಾಗಿವೆ. ಶಾಲೆಯಲ್ಲಿ ಕೆಸರು ತುಂಬಿಕೊಂಡಿದೆ. ಗ್ರಾಮದ ಸಹಿಪ್ರಾ ಶಾಲೆಯ ಆವರಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದೆ.
TAGGED:ಸಂಚಾರಕ್ಕೆ ತೊಂದರೆ