ಶೇ.60ರಷ್ಟು ರಸ್ತೆ ಅಪಘಾತದ ದುರ್ದೈವಿಗಳು ಈ ವಯಸ್ಸಿನವರೇ! ಶಾಕಿಂಗ್ ಮಾಹಿತಿ ಹಂಚಿಕೊಂಡ ಸಚಿವ ನಿತಿನ್ ಗಡ್ಕರಿ

blank

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ, ಇಂದು (ಡಿ.12) ಸಂಸತ್ತಿನ ಅಧಿವೇಶನದಲ್ಲಿ ರಸ್ತೆ ಅಪಘಾತಗಳ ಕುರಿತು ಆತಂಕಕಾರಿ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಭಾರತೀಯ ರಸ್ತೆಗಳಲ್ಲಿ ಸುರಕ್ಷತೆಯನ್ನು ಸುಧಾರಿಸಲು ಮಾನವ ನಡವಳಿಕೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯತೆ ಹೆಚ್ಚಿದೆ ಎಂದು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಮೆದೇಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾವ್ಯವಿಜಯಕುಮಾರ್ ಅವಿರೋಧ ಆಯ್ಕೆ

ಲೋಕಸಭೆಯಲ್ಲಿ ಮಾತನಾಡಿದ ಗಡ್ಕರಿ, “ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಮರೆತುಬಿಡಿ. ಹೆಚ್ಚಿದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಗೆ ಸರಿಸುಮಾರು 1,78,000 ಜೀವಗಳು ಬಲಿಯಾಗುತ್ತಿವೆ. ಶೇ.60ರಷ್ಟು ಮೃತರು 18ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ. ರಸ್ತೆ ಅಪಘಾತ ಸಾವುಗಳಲ್ಲಿ ಉತ್ತರ ಪ್ರದೇಶವು 23,000ಕ್ಕೂ ಅಧಿಕ ಸಾವುಗಳೊಂದಿಗೆ ದೇಶದಲ್ಲಿ ಮುಂಚೂಣಿಯಲ್ಲಿದೆ” ಎಂದರು.

“ತಮಿಳುನಾಡು 18,000 ಮತ್ತು ಮಹಾರಾಷ್ಟ್ರದಲ್ಲಿ 15,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಉತ್ತರ ಪ್ರದೇಶ ರಾಜ್ಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲಿಗಿದೆ. ಮಹಾರಾಷ್ಟ್ರದಲ್ಲಿ, ಈ ಅಂಕಿ ಅಂಶವು 15,000 (ಅಥವಾ ಒಟ್ಟು ಸಾವುಗಳಲ್ಲಿ ಒಂಬತ್ತು ಪ್ರತಿಶತ), ಮಧ್ಯಪ್ರದೇಶದಲ್ಲಿ 13,000 (ಶೇಕಡಾ ಎಂಟು)ಕ್ಕೂ ಅಧಿಕ ಸಾವಿನ ಸಂಖ್ಯೆಯಿದೆ. 1,400 ಮೃತರ ಸಂಖ್ಯೆಯಲ್ಲಿ ದೆಹಲಿ ಸಿಟಿ ಪಟ್ಟಿಯಲ್ಲಿ ಮೊದಲಿದ್ದರೆ, 915 ಸಾವುಗಳೊಂದಿಗೆ ಬೆಂಗಳೂರು ನಂತರದ ಸ್ಥಾನದಲ್ಲಿದೆ. ರಸ್ತೆಯ ಬದಿಯಲ್ಲಿ ಸೂಚನೆ ಇಲ್ಲದಂತೆ ಟ್ರಕ್‌ಗಳನ್ನು ನಿಲ್ಲಿಸುವುದೇ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಹಲವು ಟ್ರಕ್‌ಗಳು ಲೇನ್ ಶಿಸ್ತನ್ನು ಅನುಸರಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೆಟ್ಟೇರಿತು ‘ಅಯೋಗ್ಯ-2’: ಮತ್ತೊಮ್ಮೆ ತೆರೆ ಮೇಲೆ ಬರಲಿದೆ ಸಿದ್ದೇಗೌಡ- ನಂದಿನಿ ಲವ್‌ಸ್ಟೋರಿ

ಅಸಮರ್ಪಕ ಟ್ರಕ್ ಪಾರ್ಕಿಂಗ್ ಮತ್ತು ಲೇನ್ ಶಿಸ್ತಿನ ಕೊರತೆಯು ಅಪಘಾತಗಳಿಗೆ ಗಮನಾರ್ಹ ಕೊಡುಗೆಯಾಗಿದೆ. ಸುರಕ್ಷತೆಯನ್ನು ಹೆಚ್ಚಿಸಲು, ತುರ್ತು ಪರಿಸ್ಥಿತಿಗಳಿಗಾಗಿ ಬಸ್ ಕಿಟಕಿಗಳ ಬಳಿ ಸುತ್ತಿಗೆಗಳನ್ನು ಅಳವಡಿಸುವುದು ಸೇರಿದಂತೆ ಬಸ್ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಜಾರಿಗೊಳಿಸುವ ಯೋಜನೆಗಳನ್ನು ಸಚಿವರು ಘೋಷಿಸಿದ್ದಾರೆ,(ಏಜೆನ್ಸೀಸ್).

ಗೀಸರ್​​ ಉಪಯೋಗಿಸುವವರು ಎಂದಿಗೂ ಈ ತಪ್ಪುಗಳನ್ನು ಮಾಡ್ಬೇಡಿ! ತಪ್ಪಿದರೆ ನಿಮ್ಮ ಜೀವವೇ ಹೋದಿತು

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…