ರಸ್ತೆ ಅಪಘಾತ: ಬೈಕ್​ ಸವಾರ ಸ್ಥಳದಲ್ಲೇ ಸಾವು

ವಿಜಯಪುರ: ಟ್ರಾಕ್ಟರ್​​ ಮತ್ತು ಬೈಕ್​ ಮುಖಾಮುಖಿ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿವೆ.

ಸಿಂದಗಿ ಪಟ್ಟಣದ ಎಪಿಎಂಸಿ ಬಳಿ ಘಟನೆ ನಡೆದಿದ್ದು ಗಾಯಾಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರಮಿಠಕಲ್ ನಿವಾಸಿ ಪವನ (15) ಮೃತ ದುರ್ದೈವಿ.

ಟ್ರಾಕ್ಟರ್ ಚಾಲಕನನ್ನು ಪೊಲೀಸರು ವಶ ಪಡೆದಿದ್ದು, ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)