ಹೆದ್ದಾರಿ ಬದಿಯ ಶೌಚಗೃಹಕ್ಕೆ ಕಾರು ಡಿಕ್ಕಿ: ದಂಪತಿ ಸೇರಿ ಇಬ್ಬರು ಮಕ್ಕಳು ಸಾವು

ಹಾಸನ: ಉದಯಪುರ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ.

ಬೆಂಗಳೂರು ವಿನಾಯಕನಗರ ನಿವಾಸಿ ರೇಷ್ಮಾ ನಾಯಕ್ ಹಾಗೂ ವಿವೇಕ್ ನಾಯಕ್ ಮೃತ ದಂಪತಿ, ದಂಪತಿಯ ಮಗಳು ಆವಂತಿ ನಾಯಕ್ ಮೃತಪಟ್ಟಿದ್ದು, ಸತ್ತಿರುವ ಮತ್ತೊಂದು ಮಗುವಿನ ಹೆಸರು ತಿಳಿದುಬಂದಿಲ್ಲ.

ವಿವೇಕ್​ ನಾಯಕ್​ ತಮ್ಮ ಸ್ವಿಫ್ಟ್​ ಕಾರಿನಲ್ಲಿ ಕುಟುಂಬ ಸಮೇತರಾಗಿ ತೆರಳುತ್ತಿದ್ದ ವೇಳೆ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಬಳಿಯ ರಸ್ತೆ ಬದಿಯ ಶೌಚಗೃಹಕ್ಕೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಅಲ್ಲದೆ, ಇಂಜಿನ್​​ ಸ್ಫೋಟಗೊಂಡ ಕಾರಣ ಮಗುವಿನ ದೇಹ ಸುಟ್ಟಿರುವುದಾಗಿ ಸ್ಥಳೀಯ ಠಾಣಾ ಪೊಲೀಸರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)