ಹಿರೇಮಠ ವೃದ್ದಾಶ್ರಮದಲ್ಲಿ ದೀಪಾವಳಿ ಆಚರಣೆ

blank

ಬೆಳಗಾವಿ: ತಾಲೂಕಿನ ಬಸವನ ಕುಡಚಿ ದೇವರಾಜ ಅರಸ ಕಾಲನಿಯ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ದಾಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಸುರೇಶ ಯಾದವ ಫೌಂಡೇಶನ ವತಿಯಿಂದ ದೀಪಾವಳಿಯ ನಿಮಿತ್ಯ ಹೊಸ ಬಟ್ಟೆಗಳನ್ನು ಹಾಗೂ ಸಿಹಿ ಹಂಚು ವ ಮೂಲಕ ದೀಪಾವಳಿಯನ್ನು ಆಚರಿಸಲಾಯಿತು.

ಸುರೇಶ ಯಾದವ ಫೌಂಡೇಶನ ಅಧ್ಯಕ್ಷರಾದ ಸುರೇಶ ಯಾದವ ಅವರು ಹಿರಿಯರನ್ನು ಉದ್ದೇಶಿಸಿ ಮಾತನ್ನಾಡುತ್ತಾ ಮಕ್ಕಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಪೋಷಕರನ್ನು ಕೊನೆಗಳಿಗೆಯಲ್ಲಿ ಪ್ರೀತಿ, ಗೌರವದಿಂದ ಕಾಣಬೇಕು,
ಹಿರಿಯರ ಅನುಭವದ ನುಡಿಗಳೇ ಯುವಪೀಳಿಗೆಗೆ ಗುಣಪಾಠವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಉತ್ತಮ ಸಮಾಜ ಕಟ್ಟಲು ಶ್ರಮಿಸಬೇಕಿದೆ. . ಅವರು ನಮ್ಮನ್ನು ಕಷ್ಟಪಟ್ಟು ಬೆಳೆಸಿ, ವಿದ್ಯಾವಂತರನ್ನಾಗಿ ಮಾಡಿರುತ್ತಾರೆ. ಅವರ ಮುಪ್ಪಿನ ಕಾಲದಲ್ಲಿ ಗೌರವದಿಂದ ನಡೆಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಆದರೆ ಇಂದಿನ ಕೆಲವು ಮಕ್ಕಳು ದೊಡ್ಡವರಾದ ಮೇಲೆ ವಿದೇಶಕ್ಕೆ ಹಾರುತ್ತಾರೆ. ಹಣ ಸಂಪಾದನೆಯ ನೆಪದಲ್ಲಿ ಪೋಷಕರು ತಂದೆ ತಾಯಿಗಳ ಮರತೇ ಹೋಗುತ್ತಾರೆ. ಹೆತ್ತು ಹೊತ್ತವರನ್ನು ವೃದ್ದಾಶ್ರಮ ಸೇರಿಸಿ ಮನುಷ್ಯತ್ವ ಕಳೆದುಕೊಳ್ಳುತ್ತಾರೆ. ನಾವು ಬಿತ್ತಿದ್ದನ್ನು ನಾವೇ ಉಣ್ಣಬೇಕು ಅನ್ನೋ ಮಾತಿದೆ. ಆದರೆ ನಮ್ಮ ವೃದ್ಧರಿಗೆ ಇದು ಸಿಗುತ್ತಿಲ್ಲ. ಅವರ ಕೊನೆಯ ದಿನಗಳಲ್ಲಿ ಅವರಿಗೆ ಮುಖದಲ್ಲಿ ನೋವೇ ಹೆಚ್ಚಾಗಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ. ಮ. ನಿ. ಪ್ರ. ಡಾ:ಅಲ್ಲಮಪ್ರಭು ಮಹಾಸ್ವಾಮಿಗಳು ಅವರು ಆಶೀರ್ವಚನ ನೀಡುತ್ತಾ ಶ್ರೀ ಸುರೇಶ ಯಾದವ ಅವರು ಹಲವಾರು ವರ್ಷಗಳಿಂದ ನಮ್ಮ ಆಶ್ರಮಕ್ಕೆ ಬೆನ್ನುಲುಬಾಗಿ ನಿಂತು ಪ್ರತಿ ವರ್ಷ ವಸ್ತ್ರ ವಿತರಣೆ ಮಾಡುತ್ತಾರೆ. ದಿಕ್ಕು ಇಲ್ಲದವರೆಗೆ ದೇವರೇ ಗತಿ ಎಂಭತ್ತೆ ಸುರೇಶ ಯಾದವರ ಮುಖಾಂತರ ದೇವರು ಕೆಲಸ ಮಾಡಿಸುತ್ತಾರೆ. ನಿಮಗೆ ಯಾರು ಇಲ್ಲ ಎಂಭ ಭಾವನೆ ಬರಬಾರದು ಎಂದು ಅವರು ಪ್ರತಿ ವರ್ಷ ಎಲ್ಲಾ ತರಹದ ಸಹಾಯ ಮಾಡುತ್ತಾರೆ ಹಾಗೂ ಸಾನಿದ್ಯವನ್ನು ಶ್ರೀ ವೀರಭದ್ರೇಶ್ವರ ಸ್ವಾಮಿಗಳು ವಹಿಸಿದ್ದರು.

ಆಶ್ರಮದ ಉಸ್ತುವಾರಿ ಎಮ್. ಸ. ಚೌಗಲೆ ಸವಿಸ್ತಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ಜಾನಕಿ ಮಾರುತಿ ದೇಗ್ಗಿನವರ, ಪ್ರತಾಪ, ಸುಲೋಚನ, ಜಯಶ್ರೀ, ನಿಂಗಪ್ಪ ಕರೆಪ್ಪಗೋಳ, ರಾಜಶೇಖರ್ ಶೇಂದ್ರಿ,ಮಲ್ಲಾರಿ ದೀಕ್ಷಿತ್, ನಾನಗೌಡ ಬಿರಾದಾರ, ರಮೇಶ್ ಮಗದುಮ್, ಶಾರದಾ ದೇಸಾಯಿ, ಮಾರುತಿ ತೆಲಸಂಗ್, ಪ್ರಭು ಶಿವನಾಯಕ, ಮುಂತಾದವರು ಉಪಸ್ಥಿರಿದ್ದರು.

Share This Article

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…