ಬೆಳಗಾವಿಗೆ  ವಂದೇ ಭಾರತ್ ‘ಎಕ್ಸ್‌ಪ್ರೆಸ್‌’ ಎಂಟ್ರಿ..

ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಮೆಟ್ರೋ ರೈಲು ಸೇವೆ ಮಾದರಿಯಲ್ಲಿಯೇ ಹೈಟೆಕ್ ಸೌಲಭ್ಯಗಳನ್ನು ಒಳಗೊಂಡಿರುವ ಐಷಾರಾಮಿ, ಹೈಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೋಮವಾರ ಬೆಳಗಾವಿಗೆ ಆಗಮಿಸಿತು.
ಮಹಾರಾಷ್ಟ್ರದಿಂದ ಪುಣೆ, ಮಿರಜ್ , ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ ‌ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಬರಮಾಡಿಕೊಂಡರು. ಸಂಸದ ಜಗದೀಶ ಶೆಟ್ಟರ್, ಹಾಲಿ, ಮಾಜಿ ಶಾಸಕರು ಇದ್ದರು..
ಮಹಾರಾಷ್ಟ್ರ ಕರ್ನಾಟಕ ನಡುವೆ ಸೋಮವಾರ ದಿಂದ ಸಂಚಾರ ಆರಂಭಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾರತೀಯ ರೈಲ್ವೆಗೆ ಪ್ರಯಾಣದ ಹೊಸ ತಂತ್ರಜ್ಞಾನವನ್ನು ತೋರಿಸಿದೆ. ಈ ಸೆಮಿ ಹೈ ಸ್ಪೀಡ್ ರೈಲು ಇದು ಶತಾಬ್ದಿ ಎಕ್ಸ್ ಪ್ರಸ್ ಗಿಂತ ಹೆಚ್ಚು ವೇಗವಾಗಿ ಚಲಿಸುತ್ತದೆ ಎನ್ನಲಾಗಿದೆ.ಬೆಳಗಾವಿಗೆ  ವಂದೇ ಭಾರತ್ 'ಎಕ್ಸ್‌ಪ್ರೆಸ್‌' ಎಂಟ್ರಿ..ಬೆಳಗಾವಿಗೆ  ವಂದೇ ಭಾರತ್ 'ಎಕ್ಸ್‌ಪ್ರೆಸ್‌' ಎಂಟ್ರಿ..ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ವೈ ಫೈ ಸೌಲಭ್ಯವಿದೆ. ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಟ್ಯಾಬ್ನಲ್ಲಿ ವೈ ಫೈ ಪಡೆಯಬಹುದು. ಸಂಪೂರ್ಣ ಹವಾನಿಯಂತ್ರಿತ ಕೋಚ್‌ಗಳನ್ನು ಒಳಗೊಂಡಿದೆ.ಬೆಳಗಾವಿಗೆ  ವಂದೇ ಭಾರತ್ 'ಎಕ್ಸ್‌ಪ್ರೆಸ್‌' ಎಂಟ್ರಿ..ಕೋಚ್‌ಗಳಲ್ಲಿ ಸ್ವಯಂಚಾಲಿತ ಬಾಗಿಲುಗಳಿವೆ.ರೈಲುಗಳು ನೈರ್ಮಲೀಕರಣದ ಸಮಸ್ಯೆಯಿಂದ ಹೊರಬರಲು ಈ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಜೈವಿಕ ನಿರ್ವಾತ ಶೌಚಗೃಹ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಟಚ್ ಫ್ರೀ ಬಾತ್ರೂಮ್ ಫಿಟ್ಟಿಂಗ್ ಸೌಲಭ್ಯವನ್ನು ಈ ರೈಲು ಹೊಂದಿದೆ. ಅಲ್ಲದೆ ಸೆಮಿ-ಹೈ ಸ್ಪೀಡ್ ಆಗಿರುವ ಕಾರಣ, ರೈಲಿನಲ್ಲಿ ಊಟವನ್ನು ಟಿಕೆಟ್ ದರದಲ್ಲಿ ಸೇರಿಸಲಾಗಿದೆ.
ಮೆಟ್ರೋ ಅಥವಾ ಬುಲೆಟ್ ಟ್ರೈನ್ಗಳ ಮಾದರಿಯಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂಜಿನ್ ಇರುವುದಿಲ್ಲ. ಈ ಹಿಂದೆ ಭಾರತೀಯ ರೈಲ್ವೇಯು ಪ್ರತ್ಯೇಕವಾಗಿ ಇಂಜಿನ್ ಕೋಚ್ ಅನ್ನು ಅಳವಡಿಸುತಿತ್ತು. ಆದರೆ ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಎಂಜಿನ್ ಅನ್ನು ಅದರೊಳಗೆ ಸಂಯೋಜಿಸಲಾಗಿದೆ. ಬೆಳಗಾವಿಗೆ  ವಂದೇ ಭಾರತ್ 'ಎಕ್ಸ್‌ಪ್ರೆಸ್‌' ಎಂಟ್ರಿ..

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…