ಭೋಪಾಲ್​ನಲ್ಲಿ ಪ್ರಜ್ಞಾ ಸಿಂಗ್​ ವಿರುದ್ಧ ಹೇಮಂತ್​ ಕರ್ಕರೆ ಸಹೋದ್ಯೋಗಿ ರಿಯಾಜ್​ ದೇಶ್​ಮುಖ್​ ಸ್ಪರ್ಧೆ

ಭೋಪಾಲ್​: ಭೋಪಾಲ್​ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಸ್ಪರ್ಧಿಸುವುದಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ (ಎಟಿಎಸ್​) ಮಾಜಿ ಎಸಿಪಿ ರಿಯಾಜ್​ ದೇಶ್​ಮುಖ್​ ತಿಳಿಸಿದ್ದಾರೆ.

ಎಟಿಎಸ್​ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಕೆರಳಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ರಿಯಾಜ್​ ದೇಶ್​ಮುಖ್​ ಹೇಳಿದ್ದಾರೆ.

ಎಟಿಎಸ್​ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆ ಮಾಲೇಗಾಂವ್​ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವಹೇಳನಕಾರಿ ಪ್ರಶ್ನೆಗಳನ್ನು ಕೇಳಿ ಮಾನಸಿಕ ಹಿಂಸೆ ನೀಡಿದ್ದರು. ಆದ್ದರಿಂದ, ಅವರಿಗೆ ಇನ್ನು ಒಂದೂಕಾಲು ವರ್ಷದಲ್ಲಿ ನಿನ್ನ ಮನೆಯಲ್ಲಿ ಸೂತಕ ಆವರಿಸುತ್ತದೆ ಎಂದು ಶಾಪ ಕೊಟ್ಟಿದ್ದೆ. ಅದರಂತೆ ನಿಖರವಾಗಿ ಒಂದೂಕಾಲು ತಿಂಗಳಿಗೆ ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರ ಗುಂಡಿಗೆ ಅವರು ಬಲಿಯಾಗಿದ್ದಾಗಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಹೇಳಿದ್ದರು.

ಅವರ ಈ ಹೇಳಿಕೆ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಇಂಥ ವಿವಾದಿತ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಹೈಕಮಾಂಡ್​ ಕೂಡ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರಿಗೆ ಸೂಚನೆ ನೀಡಿತ್ತು. (ಏಜೆನ್ಸೀಸ್​)

2 Replies to “ಭೋಪಾಲ್​ನಲ್ಲಿ ಪ್ರಜ್ಞಾ ಸಿಂಗ್​ ವಿರುದ್ಧ ಹೇಮಂತ್​ ಕರ್ಕರೆ ಸಹೋದ್ಯೋಗಿ ರಿಯಾಜ್​ ದೇಶ್​ಮುಖ್​ ಸ್ಪರ್ಧೆ”

Comments are closed.