ಋತ್ವಿಕ್​ ಕಂಠಸಿರಿಗೆ ಮನಸೋತು ಕಣ್ಣು ದಾನ ಮಾಡಲು ಮುಂದಾದ ಬಳ್ಳಾರಿಯ ಅಜ್ಜ

ಬಳ್ಳಾರಿ: ಜೀ ವಾಹಿನಿಯ ಸರಿಗಮಪ ರಿಯಾಲಿಟಿ ಷೋನ ಗಾಯಕ ಋತ್ವಿಕ್ ಅವರ ಕಂಠಸಿರಿಗೆ ಮನಸೋತ ಬಳ್ಳಾರಿಯ ಅಜ್ಜ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.

ಬಳ್ಳಾರಿಯ ಕೊಟ್ಟೂರಿನ 74 ವರ್ಷದ ಸಿದ್ದಲಿಂಗನಗೌಡ ಅವರು ತಮ್ಮ ಎರಡೂ ಕಣ್ಣುಗಳನ್ನು ಋತ್ವಿಕ್​ಗೆ ಹಾಕಬೇಕು ಎಂದು ಹಠ ಹಿಡಿದಿದ್ದಾರೆ.

ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಸಿದ್ದಲಿಂಗನಗೌಡ ಅವರು, ‘ಋತ್ವಿಕ್ ಹಾಡಿಗೆ ನಾನು ಮನಸೋತ್ತಿದ್ದೇನೆ, ನನಗೆ ಯಾರೂ ಇಲ್ಲ. ನಾನು ಸಾಯುವ ಮುನ್ನ ಶ್ರೇಷ್ಠವಾದ ಕೆಲಸ ಮಾಡು ಎಂದು ನನ್ನ ತಂದೆ ಹೇಳಿದ್ದರು. ಹಾಗಾಗಿ ತಿಂಗಳ ಹಿಂದೆ ಕಣ್ಣುದಾನದ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಬರೆದುಕೊಟ್ಟಿದ್ದೇನೆ. ನನ್ನ ಸಾವಿನ ನಂತರ ನನ್ನ ಕಣ್ಣುಗಳನ್ನು ಋತ್ವಿಕ್​ಗೆ ಅಳವಡಿಸಿ ಎಂದು ಮನವಿ ಮಾಡಿದ್ದೇನೆ’ ಎಂದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *