ಸಿನಿಮಾ ನಟ-ನಟಿಯರು ಜೀವನಶೈಲಿ, ಆಹಾರ ಪದ್ಧತಿ ಹಾಗೂ ಪ್ರಾಣಿಗಳ ಕಾಳಜಿ, ಸಾಮಾಜಿಕ ಬದ್ಧತೆಯ ಕಾರಣಕ್ಕೆ ಆಗಾಗ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇದೇ ಸಾಲಿಗೆ ಬಾಲಿವುಡ್ ನಟ ರಿತೇಶ್ ದೇಶಮುಖ್ ಸೇರುತ್ತಾರೆ. ಅವರು ಮೊದಲಿನಿಂದಲೂ ಪ್ರಾಣಿಗಳ ಮೇಲಿನ ಕಾಳಜಿ ತೋರುತ್ತ ಬಂದಿದ್ದು, ಅದಕ್ಕಾಗಿ ಹಲವು ವರ್ಷಗಳಿಂದ ಸಸ್ಯಾಹಾರಿಯಾಗಿದ್ದಾರೆ. ಪತ್ನಿ ಜಿನೆಲಿಯಾ ಅವರೊಂದಿಗೆ ಸೇರಿ ‘ಇಮ್ಯಾಜಿನ್ ಮೀಟ್ಸ್’ ಎಂಬ ಸಂಸ್ಥೆಯನ್ನು ಆರಂಭಿಸಿ, ಸಸ್ಯಾಹಾರಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಇದೇ ಕಾಳಜಿಗೆ ನಟನಿಗೆ ‘ಪೇಟಾ ಇಂಡಿಯಾ’ (ಪೀಪಲ್ ಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆ್ ಅನಿಮಲ್ಸ್) ಸಂಸ್ಥೆಯು 2024ರ ‘ಅತ್ಯುತ್ತಮ ಸಸ್ಯಾಹಾರ ಸೆಲೆಬ್ರಿಟಿ’ ಎಂದು ಗೌರವಿಸಿದೆ. ಇದು ಸುಸ್ಥಿರ ಜೀವನ ಶೈಲಿ ಹಾಗೂ ಪ್ರಾಣಿಗಳ ಮೇಲಿನ ಕಾಳಜಿ ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಬಗ್ಗೆ ರಿತೇಶ್, ‘ಕ್ರೌರ್ಯಮುಕ್ತ ಜೀವನಶೈಲಿಯಿಂದ ನಾವು ಕೇವಲ ಪ್ರಾಣಿಗಳನ್ನ ಅಷ್ಟೇ ಇಡೀ ಭೂಮಿಯನ್ನು ರಕ್ಷಿಸಿದಂತೆ ಸರಿ. ಸಸ್ಯಾಹಾರದಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚುತ್ತವೆ. ಹೀಗಾಗಿ ‘ಪೇಟಾ ಇಂಡಿಯಾ’ ನೀಡಿರುವ ಗೌರವದದಿಂದ ನನ್ನ ಜವಾಬ್ದಾರಿ ಹೆಚ್ಚಿದ್ದು, ಮುಂದೆ ಪರಿಸರದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತೇನೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ರಿತೇಶ್, ‘ಹೌಸ್‌ುಲ್ 5’, ಹಾಗೂ ‘ರೇಡ್-2’ ಚಿತ್ರದಲ್ಲಿ ಬಿಜಿಯಾಗಿದ್ದಾರೆ
ರಿತೇಶ್‌ಗೆ ‘ಪೇಟಾ’ ಗೌರವ: ವರ್ಷದ ‘ಅತ್ಯುತ್ತಮ ಸಸ್ಯಾಹಾರ ಸೆಲೆಬ್ರಿಟಿ’ ಎಂಬುದಕ್ಕೆ ಪಾತ್ರರಾದ ಬಾಲಿವುಡ್ ನಟ
You Might Also Like
ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips
ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…
30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್ ಇಲ್ಲಿದೆ | Health Tips
ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…
Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…