blank

ಜ. 24ಕ್ಕೆ ಗರುಡಪುರಾಣ; ಡಿ. 27ರಿಂದ ಮುಂದಕ್ಕೆ ಹೋದ ರಿಷಿ, ಪ್ರಿಯಾಂಕಾ ಸಿನಿಮಾ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

“ಕವಲುದಾರಿ’, “ಆಪರೇಷನ್​ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕನಾಗಿರುವ ಹೊಸ ಸಿನಿಮಾ “ರುದ್ರ ಗರುಡ ಪುರಾಣ’. ಚಿತ್ರದಲ್ಲಿ ಅವರಿಗೆ “ಬ್ಯಾಡ್​ ಮ್ಯಾನರ್ಸ್​’ ಹುಡುಗಿ ಪ್ರಿಯಾಂಕಾ ಕುಮಾರ್​ ನಾಯಕಿಯಾಗಿದ್ದಾರೆ. “ಗೋಧ್ರಾ’, “ಡಿಯರ್​ ವಿಕ್ರಮ್​’ ಚಿತ್ರಗಳ ನಿರ್ದೇಶಕ ಕೆ.ಎಸ್​. ನಂದೀಶ್​ ಈ ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳುತ್ತಿದ್ದು, ಇದೇ ತಿಂಗಳ 27ರಂದು ಸಿನಿಮಾ ರಿಲೀಸ್​ ಎಂದು ಘೋಷಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದ್ದು, ಜ. 24ರಂದು ತೆರೆಗೆ ಬರುವುದಾಗಿ ಅನೌನ್ಸ್​ ಮಾಡಿದೆ.

ಜ. 24ಕ್ಕೆ ಗರುಡಪುರಾಣ; ಡಿ. 27ರಿಂದ ಮುಂದಕ್ಕೆ ಹೋದ ರಿಷಿ, ಪ್ರಿಯಾಂಕಾ ಸಿನಿಮಾ

ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು, ಪೌರಾಣಿಕ ಅಂಶಗಳೂ ಕಥೆಯಲ್ಲಿರುವುದು ವಿಶೇಷ. ಈಗಾಗಲೇ ಚಿತ್ರದ ಸ್ಟ್​ ಲುಕ್​, ಟೀಸರ್​ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. “ಕವಲುದಾರಿ’ ಬಳಿಕ ನಾಯಕ ರಿಷಿ ಮತ್ತೆ “ರುದ್ರ ಗರುಡ ಪುರಾಣ’ದಲ್ಲಿ ಖಾಕಿ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಿ, ಪ್ರಿಯಾಂಕಾ ಜತೆ ಅಶ್ವಿನಿ ಗೌಡ, ಶಿವರಾಜ್​ ಕೆ.ಆರ್​. ಪೇಟೆ, ರಾಮ್​ ಪವನ್​ ಪ್ರಮುಖ ತಾರಾಗಣದಲ್ಲಿದ್ದಾರೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಗರಡಿಯಲ್ಲಿ ಪಳಗಿರುವ ಕೃಷ್ಣಪ್ರಸಾದ್​ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಜ. 24ಕ್ಕೆ ಗರುಡಪುರಾಣ; ಡಿ. 27ರಿಂದ ಮುಂದಕ್ಕೆ ಹೋದ ರಿಷಿ, ಪ್ರಿಯಾಂಕಾ ಸಿನಿಮಾ

ಕುತೂಹಲ ಮೂಡಿಸುವ ಕಥೆ
1955ರ ಜು.2ರಂದು ಅಮೆರಿಕದ ನ್ಯೂಯಾರ್ಕ್​ನಿಂದ ಮಯಾಮಿಗೆ ಹೊರಟಿದ್ದ 57 ಜನ ಪ್ರಯಾಣಿಕರಿದ್ದ ಪ್ಯಾನ್​ ಯಾಮ್​ ಫ್ಲೈಟ್​​ 914 ಎಂಬ ವಿಮಾನ ಕಣ್ಮರೆಯಾಗಿತ್ತು. ಅದಾಗಿ 30 ವರ್ಷಗಳ ನಂತರ 1985ರಲ್ಲಿ ಈ ವಿಮಾನ ಮತ್ತೆ ಕ್ಯಾರಾಕಸ್​ನಲ್ಲಿ ಪತ್ತೆಯಾಗಿತ್ತು ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಸದ್ದು ಮಾಡಿತ್ತು. ಆದರೆ, ಈ ಟನೆಗೆ ಯಾವುದೇ ಪುರಾವೆ ಇಲ್ಲದ ಕಾರಣ, ಇದೊಂದು ಸುಳ್ಳು ಸುದ್ದಿ ಎಂದು ಅಲ್ಲಗಳೆಯಲಾಗಿತ್ತು. ಇದೀಗ ಇದೇ ರೀತಿಯ ಟನೆಯ ಸುತ್ತ “ರುದ್ರ ಗರುಡ ಪುರಾಣ’ ಸಾಗುತ್ತದೆ. ಕಣ್ಮರೆಯಾಗಿ ಮತ್ತೆ ವರ್ಷಗಳ ಬಳಿಕ ಪತ್ತೆಯಾಗುವ 17ಎ ಕಾವೇರಿ ಎಕ್ಸ್​ಪ್ರೆಸ್​ ಎಂಬ ಬಸ್​ ಸುತ್ತ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದೀಶ್​.

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…