ದುಬೈ: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವತಿಯಿಂದ ಮೊದಲ ಬಾರಿಗೆ ನೀಡಲಾಗುತ್ತಿರುವ ‘ತಿಂಗಳ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನವರಿ ತಿಂಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ರಿಷಭ್ ಪಂತ್, ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಿಡ್ನಿ ಪಂದ್ಯದಲ್ಲಿ 97 ಸಿಡಿಸಿದ್ದರೆ, ಬ್ರಿಸ್ಬೇನ್‌ನಲ್ಲಿ ಅಜೇಯ 89 ರನ್ ಗಳಿಸಿದ್ದರು.
ಇದನ್ನೂ ಓದಿ: ಡ್ರೆಸ್ಸಿಂಗ್ ರೂಂನಲ್ಲಿ ಕುಲದೀಪ್ ಕೊರಳು ಹಿಡಿದೆಳೆದ ಸಿರಾಜ್
‘ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವುದು ಪ್ರತಿಯೊಬ್ಬರ ಆಟಗಾರನಿಗೆ ಸಂತೋಷ ನೀಡುತ್ತದೆ. ಇಂಥ ಪ್ರಶಸ್ತಿ ಯುವ ಆಟಗಾರರಿಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ’ ಎಂದು ಪಂತ್ ಐಸಿಸಿ ಪ್ರಕಟಿಸಿರುವ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಶಸ್ತಿಯೂ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಸಲ್ಲಬೇಕು. ಮತದಾನ ಮಾಡಿದ ಪ್ರತಿಯೊಬ್ಬರಿಗೂ ಚಿರ ಋಣಿಯಾಗಿರುವೆ’ ಎಂದು ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣೆಗೆರೆಯಲ್ಲಿ ಪೊಗರು ಹಾಡುಗಳ ಅಬ್ಬರ
ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ಶಾಬ್ನಿಮ್ ಇಸ್ಮಾಯಿಲ್ ಈ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತವರಿನಲ್ಲಿ ಪಾಕಿಸ್ತಾಣ ವಿರುದ್ಧದ ಶಾಬ್ನಿಮ್ ಉತ್ತಮ ನಿರ್ವಹಣೆ ತೋರಿದ್ದರು. ಯುವ ಆಟಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಐಸಿಸಿ ಈ ತಿಂಗಳಿನಿಂದ ಈ ಪ್ರಶಸ್ತಿ ಆರಂಭಿಸಿದೆ.
A month to remember Down Under for @RishabhPant17 and India 🌏
Congratulations to the inaugural winner of the ICC Men’s Player of the Month award 👏
📝 https://t.co/aMWlU9Xq6H pic.twitter.com/g7SQbvukh6
— ICC (@ICC) February 8, 2021
Congratulations, @RishabhPant17! pic.twitter.com/5q8YxIS8P4
— ICC (@ICC) February 8, 2021