20.1 C
Bangalore
Friday, December 6, 2019

ವರ್ತುಲ ಹೆದ್ದಾರಿ ನಕ್ಷೆ ಬದಲು

Latest News

ಅಹವಾಲು ಸ್ವೀಕರಿಸಿದ ಎಸಿಬಿ

ಹಿರಿಯೂರು: ತಾಪಂ ಸಭಾಂಗಣದಲ್ಲಿ ಗುರುವಾರ ಚಿತ್ರದುರ್ಗ ಜಿಲ್ಲಾ ಭಷ್ಟಾಚಾರ ನಿಗ್ರಹದಳದ ಅಧಿಕಾರಿಗಳು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಎಸಿಬಿ ಡಿವೈಎಸ್‌ಪಿ ನರಸಿಂಹ ವಿ ತಾಮ್ರಧ್ವಜ ಮಾತನಾಡಿ,...

ಎಲ್ಲ ಮಠಾಧೀಶರು ಅಭಿಯಾನ ಆರಂಭಿಸಲಿ

ಚಿತ್ರದುರ್ಗ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದಿಂದ ಆಯೋಜಿಸಿರುವ ಭಗವದ್ಗೀತಾ ಅಭಿಯಾನದ ನಿಮಿತ್ತ ಶುಕ್ರವಾರ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಭಾಷಣ, ಭಗವದ್ಗೀತೆ ಕಂಠಪಾಠ...

ಕೋಟೆ ನಾಡಲ್ಲಿಂದು ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಾಮರಸ್ಯ, ದೇಶದ ಏಕತೆ ಸಲುವಾಗಿ ಶಿರಸಿ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ...

14ರಂದು ಲೋಕ್ ಅದಾಲತ್

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ನ.14ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಲೋಕ್ ಆದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು...

ಆಯುಷ್ ಉಚಿತ ಚಿಕಿತ್ಸಾ ಶಿಬಿರ

ಪರಶುರಾಮಪುರ: ಹೋಬಳಿಯ ಪಿ.ಮಹದೇವಪುರ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಇತ್ತೀಚಿಗೆ ಆಯುಷ್ ಉಚಿತ ಚಿಕಿತ್ಸಾ ಶಿಬಿರ ನಡೆಯಿತು. ಗ್ರಾಪಂ ವ್ಯಾಪ್ತಿಯ ಪಿ.ಓಬನಹಳ್ಳಿ, ಕಡೇಹುಡೆ,...

ವೇಣುವಿನೋದ್ ಕೆ.ಎಸ್.
ಮಂಗಳೂರು: ಮೂಲ್ಕಿಯಿಂದ ಪ್ರಾರಂಭವಾಗಿ ಕಟೀಲು, ಬಿ.ಸಿ.ರೋಡ್ ಮೂಲಕ ಮುಡಿಪು, ತೊಕ್ಕೊಟ್ಟಿಗೆ ಬಂದು ಸೇರುವ ಪ್ರಸ್ತಾವಿತ ಬೈಪಾಸ್ ಹೆದ್ದಾರಿಯ ಹಿಂದಿನ ಮಾರ್ಗನಕ್ಷೆ(ಅಲೈನ್‌ಮೆಂಟ್)ಬದಲಾಯಿಸಿ, ಹೊಸ ಆಯ್ಕೆಯನ್ನೇ ಅಂತಿಮಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಹಿಂದೆ ಸಿದ್ಧಪಡಿಸಲಾಗಿದ್ದ ಮಾರ್ಗನಕ್ಷೆಯಲ್ಲಿ ಭೂಸ್ವಾಧೀನದ ಸಮಸ್ಯೆಗಳು ಹೆಚ್ಚು ಎನ್ನುವ ಕಾರಣದಿಂದ ಬದಲಾಯಿಸಲಾಗಿರುವ ಮೂರನೇ ಆಯ್ಕೆಯ ಮಾರ್ಗನಕ್ಷೆಯನ್ನೇ ಅಂತಿಮಗೊಳಿಸುವಂತೆ ಕೇಂದ್ರೀಯ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ. ಈ ಮೂಲಕ ಯೋಜನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದಂತಾಗಿದೆ.

ಹಿಂದಿನ ಮಾರ್ಗನಕ್ಷೆ ಇರುವ ರಸ್ತೆಯನ್ನೇ 45 ಮೀಟರ್‌ಗೆ ಅಗಲಗೊಳಿಸುವುದಕ್ಕೆ ಒತ್ತು ನೀಡಿತ್ತು. ಹಾಲಿ ಇರುವ ರಸ್ತೆಗಳನ್ನೇ ಲಿಂಕ್ ಮಾಡಿ 77 ಕಿ.ಮೀ ಉದ್ದದ ಚತುಷ್ಪಥ ಹೆದ್ದಾರಿಯನ್ನಾಗಿ ಪರಿವರ್ತಿಸುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಈ ಕುರಿತು ಕಳೆದ ವರ್ಷ ನಡೆಸಲಾಗಿದ್ದ ಪರಿಶೀಲನಾ ಸಭೆಯಲ್ಲಿ ತಿಳಿಸಿದ್ದರು.

ಸ್ತೂಪ್ ಕನ್ಸಲ್ಟೆನ್ಸಿಯವರು ಹಳೇ ಮಾರ್ಗನಕ್ಷೆಯಂತೆ ವಿಸ್ತೃತ ಯೋಜನಾ ವರದಿ ತಯಾರಿಸಿದ್ದು, ಸುಮಾರು 2800 ಕೋಟಿ ರೂ. ಅಂದಾಜು ವೆಚ್ಚ ಯೋಜಿಸಲಾಗಿತ್ತು. ಇಂಜಿನಿಯರಿಂಗ್ ಪ್ರೊಕ್ಯೂರ್‌ಮೆಂಟ್ ಹಾಗೂ ಕನ್‌ಸ್ಟ್ರಕ್ಷನ್(ಇಪಿಸಿ) ಮಾದರಿಯಲ್ಲಿ ಯೋಜನೆ ಕಾರ್ಯಗತ ಮಾಡಲು ಯೋಜಿಸಲಾಗಿತ್ತು.
ಹೊಸ ಬೈಪಾಸ್ 45 ಮೀಟರ್ ಅಗಲದ ಚತುಷ್ಪಥ ರಸ್ತೆಯಾಗಿದ್ದು, 60 ಅಥವಾ 70 ಮೀಟರ್ ರೈಟ್ ಆಫ್ ವೇ ಹೊಂದಿರಲಿದೆ. ಗಡಿಗಳಿಗೆ ಬೇಲಿ ಅಥವಾ ಮಾರ್ಕಿಂಗ್ ಮಾಡಿ ಅತಿಕ್ರಮಣವಾಗದಂತೆ ನೋಡಿಕೊಳ್ಳಲಾಗುವುದು. ಹಿಂದಿನ ಅಲೈನ್‌ಮೆಂಟ್ ಪ್ರಕಾರ ಮೂಲ್ಕಿ ಬಳಿಯ ಪಡುಪಣಂಬೂರು ಎಂಬಲ್ಲಿಂದ ಬೈಪಾಸ್ ಶುರುವಾಗುತ್ತದೆ. ಹೊಸ ಮಾರ್ಗನಕ್ಷೆಯಲ್ಲಿ ಮೂಲ್ಕಿಯಿಂದ ಮುಂದೆ ಹೆಜಮಾಡಿಯಿಂದ ಬೈಪಾಸ್ ಶುರುವಾಗಲಿದೆ. ಹಳೆಯ ಯೋಜನೆಯಲ್ಲಿ ತೊಕ್ಕೊಟ್ಟು ಬಳಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ವರ್ತುಲ ರಸ್ತೆ ಸೇರಬೇಕಿತ್ತು. ಹೊಸ ಮಾರ್ಗನಕ್ಷೆ ಪ್ರಕಾರ ಸೋಮೇಶ್ವರ ಬಳಿ ಸೇರ್ಪಡೆಯಾಗಲಿದೆ.

ಯಾಕಾಗಿ ಬದಲಾವಣೆ?
ಹಿಂದೆ ವಿಸ್ತೃತವಾಗಿ ಚರ್ಚಿಸಿ ಮಾರ್ಗ 1ನ್ನೇ ಸೂಚಿಸಿ, ಅದಕ್ಕಾಗಿ ಡಿಪಿಆರ್ ಸಿದ್ಧಪಡಿಸಲಾಗಿತ್ತು, ಈ ಕುರಿತು ಜನಪ್ರತಿನಿಧಿಗಳನ್ನು ಒಳಗೊಂಡು ಸಂಸದ ನಳಿನ್ ಸಭೆ ನಡೆಸಿದ್ದರು. ಆದರೆ, ಆ ಮಾರ್ಗನಕ್ಷೆ ಪ್ರಕಾರ ಹಾಲಿ ರಸ್ತೆಗಳನ್ನೇ ಅಗಲಗೊಳಿಸಬೇಕಾಗುತ್ತದೆ, ಇದಕ್ಕೆ ಹೆಚ್ಚಿನ ಭೂಸ್ವಾಧೀನ ವೆಚ್ಚ ಬೇಕಾಗಬಹುದು. ಕೋರ್ಟ್ ಕೇಸ್ ಸಮಸ್ಯೆಯಾಗಬಹುದು. ಅದರ ಬದಲು ಹೊಸದಾಗಿ 3ನೇ ಮಾರ್ಗವನ್ನು ಆಯ್ಕೆ ಮಾಡಿದರೆ ಅದು ಹೆಚ್ಚಾಗಿ ಹಸಿರು ಪ್ರದೇಶಗಳಲ್ಲಿ ಹಾದುಹೋಗುವ ಕಾರಣ ಕಡಿಮೆ ವೆಚ್ಚ ಸಾಕಾಗಬಹುದು. ಸುವ್ಯವಸ್ಥಿತವಾಗಿ ಹೊಸ ಹೆದ್ದಾರಿ ಅಭಿವೃದ್ಧಿಪಡಿಸಬಹುದು ಎನ್ನುವುದು ಕೇಂದ್ರ ಹೆದ್ದಾರಿ ಸಚಿವಾಲಯದ ಅಧಿಕಾರಿಗಳ ಅಭಿಮತವಾಗಿತ್ತು. ಅದಕ್ಕಾಗಿ ಅನುಮೋದನೆ ನೀಡಲಾಗಿದೆ.

ನಾಯಕರ ಅಭಿಮತ ಬಳಿಕ ಹೊಸ ಡಿಪಿಆರ್?
ನೂತನ ಮಾರ್ಗನಕ್ಷೆಗೆ ಅನುಮೋದನೆ ನೀಡಿದ್ದರೂ, ಅದಕ್ಕೆ ಜನರ ಒಪ್ಪಿಗೆ ಮುಖ್ಯ. ಹಾಗಾಗಿ ಶೀಘ್ರ ಹೊಸ ಮಾರ್ಗನಕ್ಷೆಯನ್ನು ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವುದು. ಅವರ ಅಭಿಪ್ರಾಯ ಪಡೆದ ಬಳಿಕ ಹೊಸ ಡಿಪಿಆರ್ ಸಿದ್ಧಪಡಿಸಿ ಕೆಲಸ ಮುಂದುವರಿಸಬೇಕಾಗುತ್ತದೆ.

ಮೂರನೇ ಆಯ್ಕೆಯೇ ಅಂತಿಮ?
ಆಯ್ಕೆ 1(ಈ ಹಿಂದೆ ಸೂಚಿತ ಮಾರ್ಗ): ಮೂಲ್ಕಿ ರೈಲ್ವೇ ಸ್ಟೇಷನ್, ಬದ್ರಿಯಾ ನಗರ, ಕಿಲ್ಪಾಡಿ, ಎಸ್-ಕೋಡಿ, ಪದ್ಮನೂರು, ಕಿನ್ನಿಗೋಳಿ, ಮೂರುಕಾವೇರಿ, ಕಟೀಲು, ತೆಂಕ ಎಕ್ಕಾರು, ಹುಣ್ಸೆಮನೆ, ಪೆರ್ಮುದೆ, ಪಡುಪೆರಾರ, ಗುರುಕಂಬಳ, ಪೊಳಲಿ, ಬಂಟ್ವಾಳ, ಮೂಳೂರು ಸಜಿಪ, ಕರಿಯಂಗಳ ಮೂಲಕ ತೊಕ್ಕೊಟ್ಟು.(62.4 ಕಿ.ಮೀ), ಆಯ್ಕೆ 2: ಮೂಲ್ಕಿ, ಕಿಲ್ಪಾಡಿ, ಅರಾಳ, ಅಗ್ರಾರ್, ಮೆಲ್ಕಾರ್, ಸಜಿಪ ನಡು, ಬೊಳಿಯಾರ್, ಮುಡಿಪು, ಅಸೈಗೋಳಿ, ಸೋಮೇಶ್ವರ.(71.9 ಕಿ.ಮೀ), ಆಯ್ಕೆ 3(ಹೊಸ ಮಾರ್ಗ): ಹೆಜಮಾಡಿ, ಏಳಿಂಜೆ, ತೋಡಾರ್, ಹೊಸಬೆಟ್ಟು, ನರಿಕೊಂಬು, ಮೆಲ್ಕಾರ್, ಇರಾ, ಬಾಳೆಪುಣಿ, ಸೋಮೇಶ್ವರ(69.4 ಕಿ.ಮೀ).

Stay connected

278,738FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...