More

    ಹಕ್ಕುಗಳು ಪ್ರತಿಯೊಬ್ಬರಿಗೂ ಅವಶ್ಯಕ

    ಚಿಕ್ಕೋಡಿ: ಮಾನವ ಹಕ್ಕಗಳು ಪ್ರತಿಯೊಬ್ಬರಿಗೂ ಅವಶ್ಯಕ ಎಂದು ನ್ಯಾಯವಾದಿ ಪ್ರೀತಿ ಕಮತೆ ಹೇಳಿದರು. ತಾಲೂಕಿನ ಧುಳಗನವಾಡಿಯ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾಗ್ಯಲಕ್ಷ್ಮೀ ಯುವಜನ ಜಾಗೃತಿ ಸಾಹಿತ್ಯ ಕಲಾಪ್ರಗತಿ ಸಂಘ, ಕರೋಶಿಯ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ), ಮಹಿಳಾ ಒಕ್ಕೂಟ ಧುಳಗನವಾಡಿ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನಾತ್ಮಕ ಹಕ್ಕುಗಳು ಪ್ರತಿಯೊಬ್ಬರಿಗೂ ಅನ್ವಯಿಸುತ್ತವೆ ಎಂದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಡಕಲಾಟ ವಲಯದ ಮೇಲ್ವಿಚಾರಕ ಅಣ್ಣಪ್ಪ ಹೂವಿನಮನೆ ಮಾತನಾಡಿದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಹಾನಂದಾ ಪ್ರಕಾಶ ಕಮತೆ ಅಧ್ಯಕ್ಷತೆ ವಹಿಸಿದ್ದರು. ಗಿರಿಜಾ ಮಗದುಮ್ಮ, ಶಾಂತಾ ಮಗದುಮ್ಮ, ಮಮತಾ ಮಾಂಗ, ರಾಜೇಂದ್ರ ಮೋಳಗೆ, ಮಂಗಲ ಪಾಟೀಲ, ಆಶಾ ಕಾರ್ಯಕರ್ತೆ ಅರುಣಾ ಚಿಕ್ಕೋಡೆ, ಸುಜಾತಾ ಮಗದುಮ್ಮ ಉಪಸ್ಥಿತರಿದ್ದರು. ಶೋಭಾ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರಿಯಾ ಕಲಾಚಂದ್ರ ಸ್ವಾಗತಿಸಿ, ವಂದಿಸಿದರು.

    ಮೂಡಲ ವರದಿ: ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂದು ರಾಯಬಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ವಿಠ್ಠಲ ಕುರಂದವಾಡ ಹೇಳಿದ್ದಾರೆ. ಸಮೀಪದ ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ಸಂಯೋಜನಾ ಅಧಿಕಾರಿ ಪ್ರೊ. ಬಿ.ಎಸ್.ನಾವಿ, ಪ್ರೊ.ಎಸ್.ಎಂ.ಐಹೊಳೆ ಮಾತನಾಡಿದರು. ಪ್ರೊ. ಡಿ.ಎಸ್.ಹುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ನಿರೂಪಿಸಿದರು. ಪ್ರೊ.ಚಂದ್ರಶೇಖರ ಲಕ್ಷೆಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts