ಕಾರ್ವಿುಕರ ಸಾಮಾಜಿಕ ಭದ್ರತೆಗೆ ಬದ್ಧ

ಚಿಕ್ಕಮಗಳೂರು: ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿರುವ ಜಿಲ್ಲೆಯ 29 ಸಾವಿರ ಅಸಂಘಟಿತ ಕಾರ್ವಿುಕರು ನೋಂದಣಿಯಾಗಿದ್ದು, ಸಾಮಾಜಿಕ ಭದ್ರತೆಗೆ ಸರ್ಕಾರ ಬದ್ಧವಾಗಿದೆ ಎಂದು ಕಾರ್ವಿುಕ ಇಲಾಖೆ ಸಹಾಯಕ ಆಯುಕ್ತ ಕೆ.ಜಿ.ಜಾನ್ಸನ್ ಭರವಸೆ ನೀಡಿದರು.

ಜಿಲ್ಲಾ ಸಹೋದರತ್ವ ಸಮಿತಿ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ 28ನೇ ಮಾಸಿಕ ಸಭೆಯಲ್ಲಿ ಕಾರ್ವಿುಕರ ಹಕ್ಕು ಬಾಧ್ಯತೆ ಬಗ್ಗೆ ಮಾತನಾಡಿದರು.

ಆರಂಭದ ದಿನಗಳಲ್ಲಿ ಕಾರ್ವಿುಕ ಇಲಾಖೆ ಸಂಘಟಿತ ಕಾರ್ವಿುಕರಿಗೆ ಮಾತ್ರ ಸೀಮಿತವಾಗಿತ್ತು. ನಂತರ ಅಸಂಘಟಿತ ವಲಯಕ್ಕೂ ವಿಸ್ತರಣೆಗೊಂಡಿದೆ. ಅಸಂಘಟಿತರು ಮಾಡುವ ಕೆಲಸ, ಸ್ಥಳ, ಮಾಲೀಕರು, ವೇತನ, ಸಮಯ ಇತ್ಯಾದಿ ಸಂಗತಿಗಳ ಬಗ್ಗೆ ಕಾನೂನು ಅನುಷ್ಠಾನಗೊಂಡಿದೆ ಎಂದರು.

ತೋಟಗಳು, ಕಾರ್ಖಾನೆ, ಅಂಗಡಿ, ಹೋಟೆಲ್ ಸೇರಿ ರಾಜ್ಯದ 82 ಉದ್ಯಮಗಳ ಸಂಘಟಿತ ಕಾರ್ವಿುಕರ ವೇತನಕ್ಕೆ ಸಂಬಂಧಿಸಿ ಕನಿಷ್ಠ ವೇತನ, ವೇತನ ಪಾವತಿ ಕಾಯ್ದೆ ಮತ್ತು ಸಮಾನ ವೇತನ ಕಾಯ್ದೆಗಳು ಜಾರಿಯಲ್ಲಿವೆ. ಸಾಮಾಜಿಕ ಭದ್ರತೆಗಾಗಿ ಕಾರ್ವಿುಕ ನಷ್ಟ ಕಾಯ್ದೆ, ಪಿಎಫ್ ಕಾಯ್ದೆ ಮತ್ತು ಗ್ರಾಚ್ಯುಟಿ ಉಪಧನ ಕಾಯ್ದೆಗಳಿವೆ ಎಂದು ಮಾಹಿತಿ ನೀಡಿದರು.

ನೋಂದಾಯಿತ ಕಾರ್ವಿುಕರ ಮಕ್ಕಳಿಗೆ 3ರಿಂದ 20 ಸಾವಿರ ರೂ.ವರೆಗೂ ಧನಸಹಾಯ, ಅಪಘಾತದಿಂದ ಮರಣ ಹೊಂದಿದರೆ ಐದು ಲಕ್ಷ ರೂ. ಪರಿಹಾರ, ಮದುವೆ, ಹೆರಿಗೆ ಸೇರಿ ಜೀವನದ ಎಲ್ಲ ಹಂತಗಳಲ್ಲೂ ಧನಸಹಾಯ ಲಭ್ಯವಿದೆ. ಪಿಂಚಣಿ ಯೋಜನೆಯೂ ಇದೆ. 25 ರೂ. ಪಾವತಿಸಿ ಹೆಸರು ನೋಂದಾಯಿಸಿಕೊಂಡು ಗುರುತಿನ ಚೀಟಿ ಪಡೆದು ಪ್ರತಿವರ್ಷ 50 ರೂ. ಪಾವತಿಸಿ ನವೀಕರಣ ಮಾಡಿಕೊಂಡರೆ ಅನೇಕ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ ಎಂದು ಹೇಳಿದರು.

ಬಿಎಸ್​ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ದೊಡ್ಡಪ್ರಮಾಣದಲ್ಲಿ ಅಸಂಘಟಿತ ಕಾರ್ವಿುಕರಿದ್ದು, ಅವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ಕೆ.ಎಸ್.ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ರೇಖಾ, ಸುಕನ್ಯಾ, ಬಿಎಸ್​ಪಿ ಕಾರ್ಯದರ್ಶಿ ಗಂಗಾಧರ, ಭಕ್ತರಹಳ್ಳಿ ಪುಟ್ಟಸ್ವಾಮಿ, ವಾಯಬ್ ಜಾನ್, ಸವಿತಾ ಬ್ಯಾಪ್ಟಿಸ್ಟಾ, ವಸಂತಕುಮಾರ್, ಲತಾ ಇದ್ದರು.

2006ರಿಂದ ಕಟ್ಟಡ ಮತ್ತು ಇತರೆ ಕಾರ್ವಿುಕರ ಕಾಯ್ದೆ ಅನ್ವಯ ಕಲ್ಯಾಣ ಮಂಡಳಿ ರಚನೆಗೊಂಡಿದೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಸಹಾಯಕರು, ಗಾರೆ, ಪ್ಲಂಬಿಂಗ್, ಎಲೆಕ್ಟ್ರಿಕ್ ಕೆಲಸ ಮಾಡುವವರೊಂದಿಗೆ ರಸ್ತೆ, ಕಾಲುವೆ ಇತ್ಯಾದಿ ಕೆಲಸಗಾರರು ಇಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ.

| ಕೆ.ಜಿ.ಜಾನ್ಸನ್, ಕಾರ್ವಿುಕ ಇಲಾಖೆ ಸಹಾಯಕ ಆಯುಕ್ತ