More

    ವೇಶ್ಯಾವಾಟಿಕೆ ಕೇಂದ್ರಕ್ಕೆ ಕರೆದೊಯ್ಯದ ಟ್ಯಾಕ್ಸಿ ಚಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರ್​ಪಿಎಫ್​ ಪೇದೆ

    ಮುಂಬೈ: ವೇಶ್ಯಾವಾಟಿಕೆ ಪ್ರದೇಶಕ್ಕೆ ಕರೆದೊಯ್ಯಲು ನಿರಾಕರಿಸಿದ ಟ್ಯಾಕ್ಸಿ ಚಾಲಕನ ಮೇಲೆ ಆರ್​ಪಿಎಫ್​ ಪೇದೆಯೊಬ್ಬ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಟ್ಯಾಕ್ಸಿ ಚಾಲಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರ್​ಪಿಎಫ್​ ಪೆದೇಯನ್ನು ಅಮಿತ್​ ಧಂಡಕ್​ ಎಂದು ಪೊಲೀಸರು ಪತ್ತೆ ಮಾಡಿ ಆತನನ್ನು ಬಂಧಿಸಿದ್ದಾರೆ.

    ಛತ್ರಪತಿ ಶಿವಾಜಿ ಟರ್ಮಿನಸ್​ ನ ಪಿ.ಡಿ.ಮೆಲ್ಲೊ ರಸ್ತೆ ಬದಿಯ ಕಲ್ಲು ಬೆಂಚಿನ ಮೇಲೆ ಟ್ಯಾಕ್ಸಿ ಚಾಲಕ ಮಲಗಿದ್ದರು. ಈ ವೇಳೆ ಆಗಮಿಸಿದ ಅಮಿತ್​ ದಕ್ಷಿಣ ಮುಂಬೈನಲ್ಲಿರುವ ಗ್ರ್ಯಾಂಟ್​ ರಸ್ತೆಯಲ್ಲಿರುವ ವೇಶ್ಯಾವಾಟಿಕೆ ಕೇಂದ್ರಕ್ಕೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಚಾಲಕ ಅಲ್ಲಿಗೆ ಕರೆದುಕೊಂಡು ಹೋಗಲು ನಿರಾಕರಿಸಿದರು.

    ಇದರಿಂದ ಕುಪಿತಗೊಂಡ ಪೇದೆ ಅಮಿತ್​ ಚಾಲಕನ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ರೈಲು ನಿಲ್ದಾಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಸಹಜ ಲೈಂಗಿಕ ಕ್ರಿಯೆ ನಡೆಸಿದರು. ಅಲ್ಲದೆ ಚಾಲಕನ ಬಳಿ ಇದ್ದ ಹಣ, ಟ್ಯಾಕ್ಸಿ ಕೀ ಸೇರಿದಂತೆ ಇತರೆ ವಸ್ತುಗಳನ್ನು ತೆಗೆದುಕೊಂಡು ತೆರಳಿದರು.

    ಟ್ಯಾಕ್ಸಿ ಚಾಲಕ ಕೂಡಲೇ ಎಂಆರ್​ಎ ಮಾರ್ಗ ಪೊಲೀಸರಿಗೆ ದೂರು ನೀಡಿದರು. ಕೇಸು ದಾಖಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದರು.

    ಪೇದೆ ಅಮಿತ್​ ಧಂಡಕ್​ನನ್ನು ಸೇವೆಯಿಂದ ವಜಾಗೊಳಿಸಿ ಇಲಾಖಾ ತನಿಖೆಗೆ ಸೂಚಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts