ವಿವಿಪ್ಯಾಟ್​ ಮತಚೀಟಿಗಳ ಎಣಿಕೆ ಕುರಿತ 21 ಪಕ್ಷಗಳ ಮನವಿಯನ್ನು 60 ಸೆಕೆಂಡ್​ಗಳಲ್ಲಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಮತಚೀಟಿಗಳ ಎಣಿಕೆ ಪ್ರಮಾಣವನ್ನು ಶೇ.50 ಮತಯಂತ್ರಗಳು ಮತ್ತು ವಿವಿಪ್ಯಾಟ್​ ಯಂತ್ರಗಳಿಗೆ ಹೆಚ್ಚಿಸಬೇಕು ಎಂದು ಕೋರಿ 21 ರಾಜಕೀಯ ಪಕ್ಷಗಳು ಒಂದಾಗಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್​ ಕೇವಲ 60 ಸೆಕೆಂಡ್​ಗಳಲ್ಲಿ ತಿರಸ್ಕರಿಸಿದೆ. ಮೇ 23ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆ ವೇಳೆ ವಿವಿಪ್ಯಾಟ್​ ಯಂತ್ರಗಳ ಮತಚೀಟಿಗಳ ಪರಿಶೀಲನೆ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಪ್ರತಿಪಕ್ಷಗಳು ಮನವಿ ಮಾಡಿಕೊಂಡಿದ್ದವು.

ವಿವಿಪ್ಯಾಟ್​ ಯಂತ್ರಗಳ ಮತಚೀಟಿಗಳ ಪರಿಶೀಲನೆ ಕುರಿತು ಈ ಹಿಂದೆ ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ 21 ಪಕ್ಷಗಳ ಮನವಿಯನ್ನು ತಿರಸ್ಕರಿಸಿದರು.

ಮೊದಲ ಕೆಲವು ಹಂತಗಳ ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ಕೆಲವು ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆದ್ದರಿಂದ ವಿವಿಪ್ಯಾಟ್​ಗಳ ಮತಚೀಟಿಗಳ ಪರಿಶೀಲಿಸುವ ಕುರಿತು ಸುಪ್ರೀಂಕೋರ್ಟ್​ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿ, ಶೇ.50 ಯಂತ್ರಗಳ ಮತಚೀಟಿಗಳ ಪರಿಶೀಲನೆಗೆ ಆದೇಶಿಸಬೇಕು ಎಂದು ಕೋರಿ 21 ರಾಜಕೀಯ ಪಕ್ಷಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದವು. (ಏಜೆನ್ಸೀಸ್​)

Leave a Reply

Your email address will not be published. Required fields are marked *