Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಕಂದಾಯ ಇಲಾಖೆ ವಿರುದ್ಧ ಪ್ರತಿಭಟನೆ

Tuesday, 03.07.2018, 5:55 PM       No Comments

ಚಿಕ್ಕೋಡಿ: ಭೂಮಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಬೇರೊಬ್ಬರ ಹೆಸರಲ್ಲಿ ನೋಂದಾವಣಿ ಮಾಡಿಕೊಟ್ಟ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶಿರಾಜುದ್ದೀನ ಬಾಬುಸಾಬ ಲಾಲೀಮಿಯಾ ಮತ್ತು ರೈತರು ಮಂಗಳವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಹಸೀಲ್ದಾರ್ ಪಿ.ಕೆ.ದೇಶಪಾಂಡೆ ಮೂಲಕ ಚಿಕ್ಕೋಡಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಕುಡಚಿ ಪಟ್ಟಣದ ಶಿರಾಜುದ್ದೀನ ಬಾಬುಸಾಬ ಲಾಲೀಮಿಯಾ, ಇಮಾಮುದ್ದೀನ್ ಬಾಬುಸಾಬ ಲಾಲೀಮಿಯಾ ಮತ್ತು ಶಬರುದ್ದೀನ್ ಬಾಬುಸಾಬ ಲಾಲೀಮಿಯಾ ಎಂಬುವರ 2 ಎಕರೆ 33 ಗುಂಟೆ ಭೂಮಿಯನ್ನು ಗ್ರಾಮ ಲೆಕ್ಕಿಗ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಅಧಿಕಾರ ದುರುಪಯೋಗ ಪಡೆಸಿಕೊಂಡು ನಕಲಿ ಖರೀದಿ ಕರಾರು ಪತ್ರ ತಯಾರಿಸಿ ಅದೇ ಪಟ್ಟಣದ ಸೈಯದ ಹುಸೇನಬಾ ಲಾಲೀಮಿಯಾ ಎಂಬುವರ ಹೆಸರಿಗೆ ದಾಖಲು ಮಾಡಿದ್ದಾರೆ. ನಮ್ಮ ಪಹಣಿ ಪತ್ರಿಕೆಯಲ್ಲಿ ಯಾವುದೇ ಲೋಪದೋಷವಿಲ್ಲದಿದ್ದರೂ ಗಣಕೀಕೃತ ಲೋಪದೋಷ ತಿದ್ದುಪಡಿ ಆದೇಶದಡಿಯಲ್ಲಿ ಕಾನೂನು ಬಾಹಿರವಾಗಿ ಮಾರ್ಚ 16ರಂದು ರಾಯಬಾಗ ತಹಸೀಲ್ದಾರ್ ಈತನ ಹೆಸರು ಸೇರಿಸಿದ್ದಾರೆ. ಪ್ರಕರಣದಲ್ಲಿ ಕಂದಾಯ ಇಲಾಖೆಯ ನಾಲ್ವರು ಅಧಿಕಾರಿಗಳು ಕಾನೂನು ಉಲ್ಲಂಸಿದ್ದು, ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಶಿರಾಜುದ್ದೀನ ಬಾಬುಸಾಬ ಲಾಲೀಮಿಯಾ, ಇಮಾಮುದ್ದೀನ ಬಾಬುಸಾಬ ಲಾಲಿಮೀಯಾ, ಶಬ್ಬಿರುದ್ದೀನ್ ಬಾಬುಸಾಬ ಲಾಲಮಿಯಾ ಮತ್ತು ನ್ಯಾಯವಾದಿ ಡಿ.ಬಿ. ಕಿಲ್ಲೇದಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top