ಅಕ್ರಮ ಮದ್ಯ ಮಾರಾಟ ತಡೆಗಟ್ಟಿ

ಬೇಲೂರು: ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಎಸ್.ಸೂರಾಪುರ ಗ್ರಾಮಸ್ಥರು ಅಬಕಾರಿ ವೃತ್ತ ನಿರೀಕ್ಷಕ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ, ಬೇಲೂರು ಪಟ್ಟಣ ಸಮೀಪದ ಎಸ್.ಸೂರಾಪುರ ಗ್ರಾಮದ ರಸ್ತೆ ಪಕ್ಕದಲ್ಲಿ ತೆರೆದಿರುವ ಪೆಟ್ಟಿಗೆ ಅಂಗಡಿಗಳಲ್ಲಿ ಪ್ರತಿನಿತ್ಯ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಗ್ರಾಮದ ಯುವಕರು ದಾರಿ ತಪ್ಪುತ್ತಿದ್ದಾರೆ. ಬೆಳಗ್ಗೆಯೇ ಕುಡಿದು ಗಲಾಟೆಗಳನ್ನು ಮಾಡುತ್ತಿರುವ ನಿದರ್ಶನಗಳೂ ಹೆಚ್ಚಾಗಿವೆ. ಇದರಿಂದ ಗ್ರಾಮಸ್ಥರ ನೆಮ್ಮದಿ ಹಾಳಾಗಿದೆ. ಹೀಗಾಗಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ವೃತ್ತ ನಿರೀಕ್ಷಕ ರಮೇಶ್ ಬಾಬು, ಎಸ್.ಸೂರಾಪುರ ಗ್ರಾಮದ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ಬಂದಿರಲಿಲ್ಲ. ಆದರೆ ಗ್ರಾಮಸ್ಥರು ಈಗ ದೂರು ನೀಡಿರುವುದರಿಂದ ತಕ್ಷಣದಿಂದಲೇ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಎಸ್.ಸೂರಾಪುರ ಗ್ರಾಮದ ಕೃಷ್ಣಮೂರ್ತಿ, ಎಸ್.ಕೆ.ನಾಗೇಶ್, ರಮೇಶ್, ರಘು, ಯತೀಶ, ಗೋಪಾಲ, ಹರೀಶ, ಶಿವರಾಜ್, ಲೋಕೇಶ್ ಇದ್ದರು.

Leave a Reply

Your email address will not be published. Required fields are marked *