ಧೃವಸರ್ಜಾ ನಿಶ್ಚಿತಾರ್ಥ ನಾಳೆ, ಪ್ರೇರಣಾಗಾಗಿ 24 ಲಕ್ಷ ಮೌಲ್ಯದ ವಜ್ರದುಂಗುರ ಖರೀದಿ

ಬೆಂಗಳೂರು: ಸ್ಯಾಂಡಲ್​ವುಡ್​ ಪ್ರಿನ್ಸ್​ ಧ್ರುವಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಜತೆಗೆ ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಉಂಗುರ ಬದಲಿಸಿಕೊಳ್ಳುವ ಮೂಲಕ ‘ಭರ್ಜರಿ’ ಗಂಡು ಪ್ರೇರಣಾ ಅವರೊಂದಿಗೆ ವಿವಾಹ ಬಂಧನಕ್ಕೆ ಮುನ್ನುಡಿ ಬರೆಯಲಿದ್ದಾರೆ.

ಧರ್ಮಗಿರಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅದ್ಧೂರಿ ಅಲಂಕಾರದೊಂದಿಗೆ ನಿಶ್ಚಿತಾರ್ಥ ನೆರವೇರಲಿದೆ. ಅಲಂಕಾರದ ಉಸ್ತುವಾರಿಯನ್ನು ನಟ, ಮಾವ ಅರ್ಜುನ್‌ ಸರ್ಜಾ ಅವರು ನೋಡಿಕೊಳ್ಳುತ್ತಿದ್ದು, ಕಲಾ ನಿರ್ದೇಶಕ ಅರುಣ್ ಸಾಗರ್ ಕೈಚಳಕದಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗುತ್ತಿದೆ

ಡಿಸೈನರ್ ಪವಿತ್ರಾರೆಡ್ಡಿ ಅವರು ಧ್ರುವಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಪವಿತ್ರ ರೆಡ್ಡಿ ಅವರಿಂದ ಕೊಲ್ಕತ್ತಾದಲ್ಲಿ ಡಿಸೈನ್ ಆಗಿರುವ ಮೆರುನ್ ಕಲರ್ ವಿತ್ ಗೋಲ್ಡನ್ ಬಾರ್ಡರ್ ಇರುವ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಲಿದ್ದಾರೆ.

ಇನ್ನು ಧೃವ ಸ್ನೇಹಿತರ ಬಳಗ ಕೂಡ ವಿಭಿನ್ನ ಕಾಸ್ಟ್ಯೂಮ್‌ನಲ್ಲಿ ಕಂಗೊಳಿಸಲಿದ್ದು, ರೇಷ್ಮೆ ಕಚ್ಛೆ, ಜುಬ್ಬ ತೊಡಲಿದ್ದಾರೆ. ನಿಶ್ಚಿತಾರ್ಥಕ್ಕೆ ಸಿನಿತಾರೆಯರಾದ ಶ್ರೀಮುರುಳಿ, ರಚಿತಾ ರಾಮ್, ಪುನೀತ್ ರಾಜ್ ಕುಮಾರ್, ದರ್ಶನ್, ರಶ್ಮಿಕಾ ಮಂದಣ್ಣ, ರಾಘವೇಂದ್ರ ರಾಜ್‍ಕುಮಾರ್, ತಮಿಳಿನ ವಿಜಯ್ ಸೇತುಪತಿ, ಹರಿಪ್ರಿಯಾ ಪಾಲ್ಗೊಳ್ಳಲಿದ್ದಾರೆ.

ಪ್ರೇರಣಾಗಾಗಿ ವಜ್ರದುಂಗುರ

ನಿಶ್ಚಿತಾರ್ಥದ ಅಂಗವಾಗಿ ಪ್ರೇರಣಾಗಾಗಿ 24 ಲಕ್ಷ ರೂ. ಮೌಲ್ಯದ ವಜ್ರದುಂಗುರವನ್ನು ಧೃವ ಖರೀದಿಸಿದ್ದಾರೆ. ಪ್ರೇರಣಾಗಾಗಿ ತಮ್ಮಿಷ್ಟದ ಸಾಲಿಟೇರ್ ರಿಂಗ್ ಮಾಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)