ಮತದಾನ ಜಾಗೃತಿ ಕಾರ್ಯಕ್ರಮ

ರೇವತಗಾಂವ: ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ಮತದಾನ ಖಾತ್ರಿ ಯಂತ್ರದ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ನಾಗಠಾಣ ಮತಕ್ಷೇತ್ರದ ಮಾಸ್ಟರ್ ಟ್ರೇನರ್ ಗಂಗಾಧರ ಬಾಗೇವಾಡಿ ಮಾತನಾಡಿ, ಮತದಾರರು ಯಾರಿಗೆ ಮತ ಚಲಾಯಿಸಿದ್ದಾರೆ ಎಂಬುದನ್ನು ವಿವಿ ಪ್ಯಾಟ್ ಯಂತ್ರದಲ್ಲಿ ಖಾತ್ರಿ ಮಾಡಿಕೊಳ್ಳಬಹುದು. ಈಗಾಗಲೇ ಮಾಹಿತಿ ಗೊತ್ತಿರುವವರು ಇತರರಿಗೆ ಮಾಹಿತಿ ನೀಡಬೇಕು. ಗ್ರಾಮಸ್ಥರಿಗೆ ವಿವಿ ಪ್ಯಾಟ್ ಯಂತ್ರ ಕಾರ್ಯ ಮಾಡುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಗೋವಿಂದಪುರ, ಉಮರಜ, ದಸೂರ ಗ್ರಾಮಗಳಲ್ಲಿಯೂ ಮತದಾನ ಖಾತ್ರಿ ಯಂತ್ರ ಕುರಿತು ಜಾಗೃತಿ ಮೂಡಿಸಲಾಯಿತು.

ಸೆಕ್ಟರ್ ನೋಡಲ್ ಆಫೀಸರ್ ಮಹಾವೀರ ಮಾಲಗಾಂವೆ, ಸಿಆರ್‌ಪಿ ಡಿ.ಎಸ್. ಬಗಲಿ, ಡಾ. ಮಲ್ಲನಗೌಡ ಪಾಟೀಲ, ಎಲ್.ಕೆ. ಮೇತ್ರೆ, ವಿ.ಪಿ. ಕುಂಬಾರ, ಎಂ.ಎಚ್. ಅಡಕೆ, ಗುರು ಜೆವೂರ, ಮಾರುತಿ ವಾಲಿಕಾರ, ಎಂ.ಬಿ. ಜಾಬಗೊಂಡೆ, ತುಕಾರಾಮ ಪಾಟೀಲ ಇದ್ದರು.