ಉಮರಜದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ರೇವತಗಾಂವ: ರೇವತಗಾಂವ ಸಮೀಪದ ಉಮರಜದ ಸರ್ಕಾರಿ ಪ್ರೌಢಶಾಲೆಯಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಚಡಚಣ ತಾಲೂಕು ಮಟ್ಟದ ನೆರೆ-ಹೊರೆ ಯುವ ಸಂಸತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರದ ರುಡ್‌ಸೆಟ್ ಸಂಸ್ಥೆಯ ಆರ್.ಟಿ. ಉತ್ತರಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದಯೋನ್ಮುಖ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಸ್ವಯಂ ಉದ್ಯೋಗ ಒಂದು ಉಪಚಾರ. ರುಡ್‌ಸೆಟ್ ಸಂಸ್ಥೆ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡಿ ಸ್ವ ಉದ್ಯೋಗಿಗಳನ್ನಾಗಿಸಲು ಶ್ರಮಿಸುತ್ತಿದೆ ಎಂದರು.
ನೆಹರು ಯುವ ಕೇಂದ್ರದ ಲೆಕ್ಕ ಪಾಲಕಿ ಬಿ.ಬಿ. ದೊಡಮನಿ ಮಾತನಾಡಿದರು. ಭಾರತ ಸೇವಾದಳದ ಸಂಘಟಕರಾದ ನಾಗರಾಜ ಡೊಣ್ಣೂರ ಅವರು ರಾಷ್ಟ್ರ ಗೀತೆ ಮತ್ತು ನಾಡ ಗೀತೆಗಳನ್ನು ಸರಳ, ಸುಲಲಿತವಾಗಿ ಹಾಡಲು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು.
ಖ್ಯಾತ ಯೋಗ ತರಬೇತುದಾರ ಎಂ.ಪಿ. ದೊಡ್ಡಮನಿ ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮಗಳ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.
ಇದೇ ವೇಳೆ ಶಾಲೆಯಲ್ಲಿ ಬ್ಯಾಗ್ ರಹಿತ ದಿನಾಚರಣೆ, ವಿಶ್ವ ಪರಿಸರ ದಿನ, ಶಾಲೆ ಸಂಸತ್ ರಚನೆ, ಸಾಂಸ್ಕೃತಿಕ ಸಂಘ, ಜಲಾಮೃತದ ಮಹತ್ವ, ಸಚ್ಚಮೇವ ಜಯತೆ ಕಾರ್ಯಕ್ರಮಗಳು ನಡೆದವು. ಮುಖ್ಯಗುರು ಎಸ್.ಜಿ. ಮುಚ್ಚಂಡಿ, ಜಿ.ಆರ್. ಬಗಲಿ, ಎ.ಎಂ. ಪೂಜಾರಿ, ಮೋಸಿನ್ ಲೋಣಿ, ಡಾ. ಮಲ್ಲನಗೌಡ ಪಾಟೀಲ, ಬಿ.ಎಂ. ಹಬಗೊಂಡೆ, ವಿ.ಪಿ. ಕುಂಬಾರ, ಶ್ರೀಮತಿ ಎಂ.ಎಸ್. ಪಾಟೀಲ, ಎಸ್.ಬಿ. ಪಾಟೀಲರು ಇದ್ದರು. ದಾನಮ್ಮ ಗೊಟ್ಯಾಳ ನಿರೂಪಿಸಿದರು. ಬಿ.ಎಂ. ಹಬಗೊಂಡೆ ಸ್ವಾಗತಿಸಿದರು. ಬಂಗಾರೆಪ್ಪ ಪೂಜಾರಿ ವಂದಿಸಿದರು.

Leave a Reply

Your email address will not be published. Required fields are marked *