ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ರೇವತಗಾಂವ: ರಾಷ್ಟ್ರೀಯ ಹೆದ್ದಾರಿ 13ರ ವಡಕಬಳಿ ಗ್ರಾಮದ ಹತ್ತಿರ ಬುಧವಾರ ಸಂಜೆ ಸೊಲ್ಲಾಪುರ ಕಡೆಗೆ ಹೊರಟಿದ್ದ ಬೈಕ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಮೀಪದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ದಕ್ಷಿಣ ಸೊಲ್ಲಾಪುರ ತಾಲೂಕಿನ ಭಂಡರಕವಟೆ ಗ್ರಾಮದ ಪ್ರಕಾಶ ಶ್ರೀಧರ ಬಿರಾದಾರ (50) ಮೃತ ವ್ಯಕ್ತಿ. ಸೊಲ್ಲಾಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *