ಸ್ವರ್ಣ ಗೆದ್ದ ಮೀರಾಬಾಯಿ

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್ ವೇಟ್​ಲಿಫ್ಟರ್ ಭಾರತದ ಸೈಖೋಮ್ ಮೀರಾಬಾಯಿ ಚಾನು, ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದ ಮೊದಲ ಸ್ಪರ್ಧಾತ್ಮಕ ಕೂಟದಲ್ಲಿಯೇ ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ. ಬೆನ್ನುನೋವಿನ ಕಾರಣದಿಂದಾಗಿ 2018ರ ಕಾಮನ್ವೆಲ್ತ್ ಗೇಮ್್ಸ ಬಳಿಕ ಗಾಯಕ್ಕೆ ತುತ್ತಾಗಿದ್ದ ಚಾನು, ಥಾಯ್ಲೆಂಡ್​ನಲ್ಲಿ ನಡೆಯುತ್ತಿರುವ ಎಜಿಎಟಿ ಕಪ್ ಟೂರ್ನಿಯ 49 ಕೆಜಿ ವಿಭಾಗ ಸ್ಪರ್ಧೆಯಲ್ಲಿ ಒಟ್ಟು 192 ಕೆಜಿ ಭಾರ ಎತ್ತುವ ಮೂಲಕ ಚಿನ್ನ ಗೆದ್ದರು. –ಪಿಟಿಐ